ಪೃಥ್ವಿ ಅಂಬಾರ್ ನಟನೆಯ ‘ಕೊತ್ತಲವಾಡಿ’ ಸಿನಿಮಾ ನಿರ್ಮಾಣ ಮಾಡಿದ್ದ ನಟ ಯಶ್ ತಾಯಿ ಪುಷ್ಪ ಅರುಣ್ಕುಮಾರ್ ಮುಂದಿನ ಪ್ರಾಜೆಕ್ಟ್ನಲ್ಲಿ ನಟ ಶರಣ್ ನಾಯಕರಾಗಿ ನಟಿಸಲಿದ್ದಾರೆ.

‘ಕೊತ್ತಲವಾಡಿ’ ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭದಲ್ಲೇ ಈ ವಿಷಯವನ್ನು ಪುಷ್ಪ ಅರುಣ್ಕುಮಾರ್ ಹೇಳಿದ್ದರು. ಇತ್ತೀಚೆಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಅವರು, ‘ಮೊದಲ ಸಿನಿಮಾದಲ್ಲಿ ಒಂದು ತಂಡ ಸಿದ್ಧವಾಗಿದೆ. ಶರಣ್ ನನಗೆ ಮನೆ ಮಗನಂತೆ. ‘ಕೊತ್ತಲವಾಡಿ’ ಸಿನಿಮಾ ಆರಂಭಕ್ಕೂ ಬಹಳ ಮೊದಲೇ ಶರಣ್ ಮನೆಗೆ ಹೋಗಿದ್ದೆ. ಆವಾಗಲೇ ನಾನು ಸಿನಿಮಾ ಕ್ಷೇತ್ರಕ್ಕೆ ಹೆಜ್ಜೆ ಇಡುವ ಬಗ್ಗೆ ಶರಣ್ ಜೊತೆ ಮಾತನಾಡಿದ್ದೆ’ ಎಂದಿದ್ದಾರೆ.

‘ಶರಣ್ ಹಾಸ್ಯಕ್ಕೆ ಹೆಸರಾದವರು. ಸಿನಿಮಾವನ್ನೇ ಪ್ರೀತಿಸುವ ವ್ಯಕ್ತಿ. ಯಶ್ ಕೂಡಾ ಶರಣ್ ಬಗ್ಗೆ ಮಾತನಾಡುತ್ತಿದ್ದ. ಯಶ್ ಜೊತೆಗೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಾವಿನ್ನೂ ಸಿನಿಮಾದ ಎಬಿಸಿಡಿ ಕಲಿಯುತ್ತಿದ್ದೇವೆ. ಇಂತಹವರಿಗೆ ಸಿನಿಮಾ ಮಾಡಿಕೊಂಡು ನಂತರ ದೊಡ್ಡ ಸಿನಿಮಾಗಳನ್ನು ಮಾಡೋಣ. ಎಲ್ಲರೂ ಯಶ್ಗೆ ಸಿನಿಮಾ ಮಾಡುವುದಿಲ್ಲವೇ ಎಂದು ಕೇಳುತ್ತಾರೆ. ಯಶ್ಗೆ ಸಿನಿಮಾ ಮಾಡಲು ದುಡ್ಡು ಬೇಕಲ್ಲವೇ? ಸದ್ಯ ಯಶ್ ಅಮ್ಮನಾಗಿ ನನನ್ನು ಗುರುತಿಸಿದ್ದಾರೆ. ಮಗನಿಂದ ತಾಯಿಗೆ ಹೆಸರು ಬಂದಿರುವುದು ಹೆಮ್ಮೆಯ ವಿಷಯವೇ. ಇದು ತಾಯಿ–ಮಗನ ಸಂಬಂಧ. ಕೆಲಸ ಎಂದು ಬಂದಾಗ ಡ್ರೈವರ್ ಹೆಂಡ್ತಿ ಪುಷ್ಪ ಅರುಣ್ಕುಮಾರ್ ಆಗಿ ಗುರುತಿಸಿಕೊಳ್ಳುವುದೇ ನನಗೆ ಇಷ್ಟ. ಡ್ರೈವರ್ ಹೆಂಡ್ತಿಯಾಗಿ ಒಂದು ಸಿನಿಮಾ ಪ್ರೊಡಕ್ಷನ್ ಮಾಡಿದ್ದೇನೆ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಪುಷ್ಪ ಅರುಣ್ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.