ಸೋಮವಾರ, ಏಪ್ರಿಲ್ 19, 2021
23 °C

ಮಹಿಳೆಯರ ಅವಹೇಳನಕಾರಿ ಟ್ರೋಲ್‌: ನಟಿ ಶೀತಲ್‌ಗೆ ಕೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟ್ರೋಲ್‌ ಪೇಜ್‌ಗಳಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸುವವರ ವಿರುದ್ಧ ನಟಿ ಶೀತಲ್‌ ಶೆಟ್ಟಿ ಗರಂ ಆಗಿದ್ದಾರೆ. ಅಂತಹ ಪುಟಗಳ ಸ್ಕ್ರೀನ್‌ಷಾಟ್‌ಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಶೀತಲ್‌, ಮಹಿಳೆಯ ದೇಹಕ್ಕೆ ಅವಮಾನಿಸುವ (ಬಾಡಿ ಶೇಮಿಂಗ್‌) ಪ್ರವೃತ್ತಿಯನ್ನು ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಪುಟ್ಟ ಬರಹವೊಂದರಲ್ಲಿ ತಮ್ಮ ಅಸಹನೆ ವ್ಯಕ್ತಪಡಿಸಿರುವ ಅವರು, ‘ನನ್ನ ಕನ್ನಡ ತಾಯೊ ಬೇರೆಯವರನ್ನು ದ್ವೇಷಿಸಲು ನನಗೆ ಕಲಿಸಿಲ್ಲ. ನಮ್ಮ ಕನ್ನಡ ನಾಡಿನಲ್ಲಿ ಹೆಣ್ಣನ್ನು ಅಸಹ್ಯವಾಗಿ ನಿಂದಿಸುವ ಪರಿಪಾಠ ಇಲ್ಲ. ದಯವಿಟ್ಟು ಇವುಗಳಿಗೆ ಕನ್ನಡಮ್ಮನ ಅಭಿಮಾನದ ಹೆಸರನ್ನು ತರಬೇಡಿ. ಇದು ನಾನು ಒಬ್ಬರ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲರ ಪರವಾಗಿ ಮಾತನಾಡುತ್ತಿದ್ದೇನೆ. ಟ್ರೋಲ್‌ ಪೇಜ್‌ಗಳನ್ನು ನಾನು ಫಾಲೋ ಮಾಡುತ್ತೇನೆ. ಚೆನ್ನಾಗಿರುವ ಮೀಮ್‌ಗಳನ್ನು ಆನಂದಿಸುತ್ತೇನೆ. ಆದರೆ, ಇದು ( ಅಸಹ್ಯಕರವಾಗಿ ಚಿತ್ರಿಸುವುದು) ಕ್ರಿಯೇಟಿವಿಟಿ ಅಲ್ಲ. ಇದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಇಂಥವುಗಳನ್ನು ನೋಡಿ ಖುಷಿಪಡಬೇಡಿ. ಇದು ಸಮಾಜಕ್ಕೆ ಮಾರಕ.  ಇಂಥವುಗಳನ್ನು ಖಂಡಿಸಿ. ನಮ್ಮ ನಾಡಿನ ಸ್ವಾಸ್ಥ್ಯ ಕಾಪಾಡಿ ಎಂದಿರುವ ಅವರು ನನ್ನ ಬೇಸರ ಟ್ರೋಲ್‌ ಪೇಜ್‌ಗಳ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು