ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳಿಗೆ ಮೋಸ ಮಾಡಿರುವ ಶೀಜನ್‌ ಖಾನ್‌ಗೆ ಶಿಕ್ಷೆಯಾಗಬೇಕು: ತುನಿಷಾ ತಾಯಿ

Last Updated 26 ಡಿಸೆಂಬರ್ 2022, 11:09 IST
ಅಕ್ಷರ ಗಾತ್ರ

ಮುಂಬೈ: ನಟಿ, ಮಾಡೆಲ್‌ ತುನಿಷಾ ಶರ್ಮಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರ ಶೀಜನ್‌ ಮೊಹಮ್ಮದ್‌ ಖಾನ್‌ಗೆ ಶಿಕ್ಷೆಯಾಗಬೇಕು ಎಂದು ತುನಿಷಾ ಒತ್ತಾಯಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ತುನಿಷಾ ಶರ್ಮಾ ತಾಯಿ ವನಿತಾ, ನನ್ನ ಮಗಳಿಗೆ ಮೋಸ ಮಾಡಿರುವಶೀಜನ್‌ ಖಾನ್‌ಗೆ ಶಿಕ್ಷೆಯಾಗಬೇಕು, ಅವನನ್ನು ಸುಮ್ಮನೇ ಬಿಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತುನಿಷಾ ಹಾಗೂ ಶೀಜನ್‌ ಪ್ರೀತಿಸುತ್ತಿದ್ದರು. ತುನಿಷಾಳನ್ನು ಮದುವೆಯಾಗುವುದಾಗಿ ಶೀಜನ್‌ ಹೇಳಿದ್ದ. ಆದರೆ ಅವಳಿಗೆಮೋಸ ಮಾಡಿ, ಬೇರೆ ಯುವತಿಯ ಜೊತೆ ಸಂಬಂಧವಿಟ್ಟುಕೊಂಡಿದ್ದ.

ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಕಳೆದ 15 ದಿನಗಳಿಂದ ಇಬ್ಬರು ಪರಸ್ಪರ ದೂರವಾಗಿದ್ದರು ಎಂದು ವನಿತಾ ಹೇಳಿದ್ದಾರೆ.

ಶೀಜನ್‌ಗೆ ತಕ್ಕ ಶಿಕ್ಷೆಯಾಗಬೇಕು, ಅವನನ್ನು ಸುಮ್ಮನೇ ಬಿಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶೀಜನ್‌ ಖಾನ್‌ ಅವರ ಮೇಲೆ ಐಪಿಸಿ ಸೆಕ್ಷನ್‌ 306ರಡಿ (ಆತ್ಮಹತ್ಯೆ ಕುಮ್ಮಕ್ಕು) ಪ್ರಕರಣ ದಾಖಲು ಮಾಡಲಾಗಿದೆ.ಶೀಜನ್‌ ಖಾನ್‌ ಬಂಧನವಾಗಿದ್ದು, ಅವರನ್ನು ಡಿ. 28ರ ವರೆಗೆ ನ್ಯಾಯಾಲಯ ಪೊಲೀಸ್‌ ವಶಕ್ಕೆ ನೀಡಿದೆ.

ತುನಿಷಾ ಶರ್ಮಾ ಅವರು ತಮ್ಮ ಧಾರಾವಾಹಿಯೊಂದರ ಶೂಟಿಂಗ್ ಸೆಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT