‘ಫೆಮಿನಾ’ದಲ್ಲಿ ಮಿಂಚಿದ ಶಿಲ್ಪಾ

ಬುಧವಾರ, ಜೂನ್ 26, 2019
29 °C
ಫೋಟೊಶೂಟ್

‘ಫೆಮಿನಾ’ದಲ್ಲಿ ಮಿಂಚಿದ ಶಿಲ್ಪಾ

Published:
Updated:
Prajavani

ವಯಸ್ಸಿಗೂ ಮೀರಿ ಸೌಂದರ್ಯ ಕಾಪಿಟ್ಟುಕೊಂಡಿರುವ ಶಿಲ್ಪಾ ಶೆಟ್ಟಿ ಸಿನಿಮಾ ಮಾಡಲಿ ಬಿಡಲಿ ಅಭಿಮಾನಿಗಳ ಮನದಲ್ಲಿ ಸದಾ ಹಸಿರಾಗಿರುತ್ತಾರೆ. ಯೋಗ ಮತ್ತು ಫಿಟ್‌ನೆಸ್‌ ಐಕಾನ್ ಅಂತಲೇ ಜನಪ್ರಿಯವಾಗಿರುವ ಶಿಲ್ಪಾ ಈಚೆಗೆ ‘ಫೆಮಿನಾ’ ಮುಖಪುಟವನ್ನು ಅಲಂಕರಿಸಿದ್ದಾರೆ. 

‘ಫೆಮಿನಾ’ದ ಮುಖಪುಟವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಶಿಲ್ಪಾ, ಮುಖಪುಟದ ಫೋಟೊಕ್ಕಾಗಿ ಇಡೀ ತಂಡ ಹೇಗೆ ಕೆಲಸ ಮಾಡಿತು ಎನ್ನುವ ಕುರಿತೂ ಬರೆದುಕೊಂಡಿದ್ದಾರೆ. ‘ಫೆಮಿನಾ’ದ ಜೂನ್ ಮುಖಪುಟ ಬಿಸಿಬಿಸಿಯಾಗಿದೆ. ಈ ಬಿಸಿಯನ್ನು ಕರಗಿಸಿದವರು ತಾನ್ಯಾ ಚೈತನ್ಯ. ಥ್ಯಾಂಕ್ಯೂ ಹಾಟ್ ಮುಖಪುಟಕ್ಕಾಗಿ....ಎಂದು ಶಿಲ್ಪಾ ಬರೆದುಕೊಂಡಿದ್ದಾರೆ. 

‘ಫೆಮಿನಾ’ದ ಮುಖಪುಟದಲ್ಲಿ ಈಜುಡುಗೆಯಲ್ಲಿ ಮಿಂಚಿರುವ ಶಿಲ್ಪಾ, ತಮ್ಮ ಮೈಬಣ್ಣದ ಮೇಲುಡುಗೆ ಧರಿಸಿದ್ದಾರೆ. 44ರ ಹರೆಯದ ಶಿಲ್ಪಾ ನಿತ್ಯ ಯೋಗ ಮತ್ತು ವ್ಯಾಯಾಮವನ್ನು ತಪ್ಪಿಸುವುದಿಲ್ಲವಂತೆ. ತಮ್ಮದೇ ಹೆಸರಿನಲ್ಲಿ ಫಿಟ್‌ನೆಸ್ ಆ್ಯಪ್ ಅನ್ನೂ  ಹೊಂದಿರುವ ಅವರು ಡಯೆಟ್ ಪ್ರಜ್ಞೆಯುಳ್ಳವರು. ಅದಕ್ಕಾಗಿಯೇ ತಮ್ಮದೇ ಆದ ಕಿಚನ್ ಆ್ಯಪ್ ಅನ್ನೂ ಶಿಲ್ಪಾ ರೂಪಿಸಿದ್ದಾರೆ. ಅದರಲ್ಲಿ ಆರೋಗ್ಯಕರವನ್ನು ದೇಹವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಡಯೆಟ್ ಪ್ಲಾನಿಂಗ್ ಅನ್ನು ಶಿಲ್ಪಾ ನೀಡುತ್ತಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !