ಶನಿವಾರ, ಸೆಪ್ಟೆಂಬರ್ 18, 2021
30 °C

ಶಿಲ್ಪಾ ಶೆಟ್ಟಿ- ರಾಜ್‌ ಕುಂದ್ರಾ ನಿವಾಸದ ಮೇಲೆ ಅಪರಾಧ ವಿಭಾಗದ ಅಧಿಕಾರಿಗಳ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಅಶ್ಲೀಲ ಚಿತ್ರ ಪ್ರಕರಣದ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಅಧಿಕಾರಿಗಳು ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಮುಂಬೈನ ಜುಹೂ ಪ್ರದೇಶದಲ್ಲಿರುವ ಕುಂದ್ರಾ ನಿವಾಸದ ಮೇಲೆ ಅಧಿಕಾರಿಗಳಿಂದ ಶುಕ್ರವಾರ ದಾಳಿ ನಡೆದಿದೆ ಎಂದು  ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ಈ ನಿವಾಸದಲ್ಲಿ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್‌ ಕುಂದ್ರಾ ಮತ್ತು ಮಕ್ಕಳು ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಮತ್ತು ಆ್ಯಪ್‌ಗಳ ಮೂಲಕ ಅವುಗಳನ್ನು ಬಿತ್ತರಿಸಿದ ಆರೋಪದ ಮೇಲೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಸ್ಥಳೀಯ ನ್ಯಾಯಾಲಯ ಜುಲೈ 27ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ರಾಜ್‌ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದರು. ಪೊಲೀಸರು ಮತ್ತೊಬ್ಬ ಆರೋಪಿ ರಿಯಾನ್‌ ಜಾನ್‌ನನ್ನು ಬಂಧಿಸಿದ್ದು ಆತನನ್ನು ಜುಲೈ 27ರವರೆಗೂ ನ್ಯಾಯಾಲಯ ಪೊಲೀಸ್‌ ವಶಕ್ಕೆ ಒಪ್ಪಿಸಿದೆ. ಕುಂದ್ರಾ ಹಾಗೂ ರಿಯಾನ್‌ನನ್ನು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಈ ಪ್ರಕರಣದಲ್ಲಿ ಕುಂದ್ರಾ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ಇವುಗಳನ್ನೂ ಓದಿ...

ಅಶ್ಲೀಲ ಚಿತ್ರ ಮತ್ತು ಬೆಟ್ಟಿಂಗ್‌: ವ್ಯಾವಹಾರಿಕ ವಿವಾದಗಳಲ್ಲಿ 'ರಾಜ್ ಕುಂದ್ರಾ'

ನಟಿಗೆ ನಗ್ನವಾಗಿ ಕಾಣಿಸಿಕೊಳ್ಳಲು ಹೇಳಿದ್ದ ರಾಜ್‌ ಕುಂದ್ರಾ?

ಜೈಲಲ್ಲಿ ಕೊಳೆಯಲಿ: ರಾಜ್‌ ಕುಂದ್ರಾಗೆ ಯೂಟ್ಯೂಬ್‌ ಸ್ಟಾರ್‌ ಶಾಪ ಹಾಕಿದ್ದೇಕೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು