ಬಳುಕುವ ಬಳ್ಳಿಯಂಥ ಮೈಮಾಟ ಕಾಪಾಡಿಕೊಳ್ಳಲು ಡಯಟ್, ಯೋಗ ಎಷ್ಟು ಮುಖ್ಯ ಎಂದು ಅರಿತವರು ಕನ್ನಡತಿ ಶಿಲ್ಪಾಶೆಟ್ಟಿ. ತಮ್ಮ ಯುಟ್ಯೂಬ್ ಚಾನೆಲ್ ಮತ್ತು ಇನ್ಸ್ಟಾಗ್ರಾಂ ಅಕೌಂಟ್ಗಳಲ್ಲಿ ಆರೋಗ್ಯಕರ ಸ್ವಾದಿಷ್ಟ ತಿನಿಸುಗಳ ತಯಾರಿ ಬಗ್ಗೆ ಶಿಲ್ಪಾ ಪೋಸ್ಟ್ ಮಾಡುವ ವಿಡಿಯೊಗಳನ್ನು ಲಕ್ಷಾಂತರ ಅಭಿಮಾನಿಗಳು ಆಸಕ್ತಿಯಿಂದ ನೋಡುತ್ತಾರೆ.

ಶಿಲ್ಪಾ ಪಾಲಿಗೆ ಭಾನುವಾರ ಎನ್ನುವುದು ದೈನಂದಿನ ಡಯಟ್ನಿಂದ ತುಸು ದೂರ ಸರಿದು,ನಾಲಿಗೆಗೆ ಸವಿ ಉಣಿಸುವ ದಿನ. ಸಾಮಾನ್ಯವಾಗಿ ರಸಗುಲ್ಲಾ, ಗುಲಾಬ್ ಜಾಮೂನ್, ಕೇಕ್ನಂಥವು ಅವರಭಾನುವಾರದ ಸಂಭ್ರಮ ಹೆಚ್ಚಿಸುತ್ತವೆ. ಆದರೆ ಈ ಭಾನುವಾರ ಎಂದಿನಂತೆ ಇರಲಿಲ್ಲ.

ಈ ಬಾರಿ ಶಿಲ್ಪಾ ಹೈಹೀಲ್ಡ್ ಶೂ ವಿನ್ಯಾಸದ ಚಾಕೊಲೇಟ್ ಒಂದನ್ನು ಮನಸಾರೆ ಸವಿದರು.ಶೂ (ಚಾಕೊಲೇಟ್) ಕೈಲಿ ಹಿಡಿದು, ‘ಆಹಾ ಎಷ್ಟು ಚೆನ್ನಾಗಿದೆ. ಶೂ ತಿಂತೀರಾ?’ ಎಂದು ಅಭಿಮಾನಿಗಳನ್ನು ಪ್ರಶ್ನಿಸಿ ಉದ್ದನೆ ಹೀಲ್ಡ್ ಅನ್ನು ಬಾಯಿಂದ ಕಚ್ಚಿ, ರುಚಿಗೆ ಮನಸೋತು ಕಣ್ಮುಚ್ಚಿದರು. ಇನ್ನೊಮ್ಮೆ ಚಾಕೊಲೇಟ್ ಕಚ್ಚಿ, ಅದರ ರುಚಿ ಮೆಚ್ಚಿ ಹಣೆಗೆ ಒತ್ತಿಕೊಂಡಾಗ ಚಾಕೊಲೇಟ್ ಮುರಿಯಿತು. ಅದನ್ನು ನೋಡುತ್ತಾ ಶಿಲ್ಪಾ ಮಾತ್ರ ಮನಸಾರೆ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.