ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ನಾನ್‌ ವೈಲೆನ್ಸ್‌’ಗೆ ಶಿವರಾಜ್‌ಕುಮಾರ್‌ ಸಾಥ್‌

Published 31 ಮೇ 2024, 18:43 IST
Last Updated 31 ಮೇ 2024, 18:43 IST
ಅಕ್ಷರ ಗಾತ್ರ

ತಮಿಳಿನ ‘ಮೆಟ್ರೊ’ ಸಿನಿಮಾ ಖ್ಯಾತಿಯ ಆನಂದ್‌ ಕೃಷ್ಣನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ನಾನ್‌ ವೈಲೆನ್ಸ್‌’ ಸಿನಿಮಾಗೆ ಶಿವರಾಜ್‌ಕುಮಾರ್‌ ಸಾಥ್‌ ನೀಡಿದ್ದು, ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಗೊಳಿಸಿದ್ದಾರೆ. 

‘ಎಕ್ಸ್‌’ ಮುಖಾಂತರ ಫಸ್ಟ್‌ಲುಕ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಕೋರಿದ್ದಾರೆ ಶಿವರಾಜ್‌ಕುಮಾರ್‌. ಮೆಟ್ರೋ ಶಿರೀಶ್, ಬಾಬಿ ಸಿಂಹ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಅದಿತಿ ಬಾಲನ್, ಗರುಡ ರಾಮ್, ಆದಿತ್ಯ ಕಥಿರ್ ತಾರಾಬಳಗದಲ್ಲಿದ್ದಾರೆ. 90ರ ದಶಕದಲ್ಲಿ ಮಧುರೈ ಜೈಲಿನೊಳಗೆ ಸಂಭವಿಸುವ ಘಟನೆಗಳ ಸುತ್ತ ಪ್ರಧಾನವಾಗಿ ಸುತ್ತುವ ಒಂದು ಚಿತ್ರಕಥೆಯನ್ನು ಆನಂದ್ ರಚಿಸಿದ್ದಾರೆ. ‘ಮೆಟ್ರೋ’ ಮತ್ತು ‘ಕೊಡಿಯಲ್ಲಿ ಒರುವನ್’ ಚಿತ್ರಗಳ ನಂತರ ನಿರ್ದೇಶಕ ಆನಂದ ಕೃಷ್ಣನ್ ಈ ಚಿತ್ರದ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 

‘ನಾನ್ ವೈಲೆನ್ಸ್’ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರದ ಟೀಸರ್ ಮತ್ತು ಟ್ರೇಲರ್ ಬಿಡುಗಡೆಯಾಗಲಿದೆ ಎಂದಿದೆ ಚಿತ್ರತಂಡ. ತಮಿಳು, ತೆಲುಗು, ಮಲಯಾಳ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಎಕೆ ಪಿಕ್ಚರ್ಸ್‌ನಡಿ ಲೇಖಾ ‘ನಾನ್ ವೈಲೆನ್ಸ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಯುವನ್ ಶಂಕರ್‌ರಾಜ್ ಸಂಗೀತ, ಎನ್. ಎಸ್. ಉದಯ್ ಕುಮಾರ್ ಛಾಯಾಚಿತ್ರಗ್ರಹಣ, ಶ್ರೀಕಾಂತ್ ಎನ್. ಬಿ. ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT