ಮಂಗಳವಾರ, ನವೆಂಬರ್ 24, 2020
22 °C

ಶಿವರಾಜ್‌ಕುಮಾರ್‌- ಧನಂಜಯ ಹೊಸ ಚಿತ್ರದ ಕಾರ್ಯ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವರಾಜ್‌ ಕುಮಾರ್‌- ಧನಂಜಯ ಅಭಿನಯದ ಹೊಸ ಚಿತ್ರವೊಂದರ ಕೆಲಸ ಆರಂಭವಾಗಿದೆ. ಚಿತ್ರವನ್ನು ವಿಜಯ್‌ ಮಿಲ್ಟನ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಅನೂಪ್‌ ಸೀಳಿನ್‌ ಸಂಗೀತ ನೀಡುತ್ತಿದ್ದಾರೆ. ಕೃಷ್ಣಸಾರ್ಥಕ್‌ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕೃಷ್ಣ ಅವರು ಈ ಮೊದಲು ‘ದಯವಿಟ್ಟು ಗಮನಿಸಿ’ ಚಿತ್ರ ನಿರ್ಮಿಸಿದವರು. 

ಕೃಷ್ಣ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ‘ವಿಜಯ ದಶಮಿ ಶುಭಾಶಯಗಳು.. ಸಂಗೀತ ಆರಂಭಗೊಂಡಿದೆʼ ಎಂದು ಬರೆದುಕೊಂಡಿದ್ದಾರೆ. 

ಧನಂಜಯ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಮುಂದಿನ 2021ರಲ್ಲಿ ನಮ್ಮ ಶಿವಣ್ಣನೊಂದಿಗೆ ಮತ್ತೆ ಕಾಣಿಸಿಕೊಳ್ಳುತ್ತಿದ್ದೇವೆ ಎಂದು ಬರೆದಿದ್ದಾರೆ. ಪ್ರೊಡಕ್ಷನ್‌-2 ಎಂಬ ಪೋಸ್ಟರನ್ನೂ ಹಂಚಿಕೊಂಡಿದ್ದಾರೆ.

ಧನಂಜಯ ಅವರು ವಿಜಯ್‌ ಮಿಲ್ಟನ್‌ ಅವರೊಂದಿಗೆ ಈ ಹಿಂದೆಯೂ ಕೆಲಸ ಮಾಡಿದ್ದರು. ತಮಿಳು ಚಿತ್ರದಲ್ಲಿಯೂ ಧನಂಜಯ ಪಾತ್ರ ನಿರ್ವಹಿಸುತ್ತಿದ್ದಾರೆ. ಹೊಸ ಚಿತ್ರದ ಕಥೆಯನ್ನು  ಮಿಲ್ಟನ್‌ ಅವರು ಹೇಳಿದಾಗಲೇ ಶಿವರಾಜ್‌ ಕುಮಾರ್‌ ಖುಷಿ ಪಟ್ಟು ಒಪ್ಪಿಕೊಂಡರಂತೆ. 

ಟಗರು ಮರು ಬಿಡುಗಡೆ: ಅಂದಹಾಗೆ ಶಿವರಾಜ್‌ ಕುಮಾರ್‌ ಅಭಿನಯದ ಟಗರು ಸಿನಿಮಾ ಕೂಡಾ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಗೋಪಾಲನ್‌ ಸಿನಿಮಾದಲ್ಲಿ ಈಗಾಗಲೇ ಪ್ರದರ್ಶನ ಕಾಣುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು