ಶುಕ್ರವಾರ, ಫೆಬ್ರವರಿ 3, 2023
15 °C

ಧನುಷ್‌ ಜೊತೆ ತೆರೆ ಮೇಲೆ ‘ಕರುನಾಡ ಚಕ್ರವರ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ರಜನಿಕಾಂತ್‌ ನಟಿಸಲಿರುವ ‘ಜೈಲರ್’ ಸಿನಿಮಾ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿರುವ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌, ಇದೀಗ ಮತ್ತೊಂದು ತಮಿಳು ಸಿನಿಮಾಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಘೋಷಣೆಯಾಗಿದ್ದ ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್‌ ನಟನೆಯ ಹೊಸ ಸಿನಿಮಾ ‘ಕ್ಯಾಪ್ಟನ್‌ ಮಿಲ್ಲರ್‌’ನಲ್ಲಿ ಶಿವರಾಜ್‌ಕುಮಾರ್‌ ಅವರು ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಧನುಷ್‌ ಅಣ್ಣನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಶಿವರಾಜ್‌ಕುಮಾರ್‌ ಅವರ ಪಾತ್ರದ ಬಗ್ಗೆ ಹಾಗೂ ಚಿತ್ರದ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಇನ್ನಷ್ಟೇ ಹಂಚಿಕೊಳ್ಳಬೇಕಿದೆ. ಈ ಚಿತ್ರವನ್ನು ಅರುಣ್‌ ಮಾಥೇಶ್ವರನ್‌ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಶಿವರಾಜ್‌ಕುಮಾರ್‌, ‘ಈ ಚಿತ್ರತಂಡದ ಜೊತೆ ಸೇರಿರುವುದು ಖುಷಿಯಾಗಿದೆ ಹಾಗೂ ಪ್ರತಿಭಾನ್ವಿತ ನಟ ಧನುಷ್‌ ಅವರ ಜೊತೆ ಕಾರ್ಯನಿರ್ವಹಿಸಲು ಉತ್ಸುಕನಾಗಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

ವಯಸ್ಸು 60 ಆದರೂ, ಶಿವರಾಜ್‌ಕುಮಾರ್‌ ಪ್ರಸ್ತುತ ಚಂದನವನದ ಬ್ಯುಸಿಯೆಸ್ಟ್‌ ನಟ. ಅವರ ನಟನೆಯ 125ನೇ ಸಿನಿಮಾ ‘ವೇದ’ ಡಿಸೆಂಬರ್‌ 23ರಂದು ತೆರೆಕಾಣಲಿದೆ. ಇದರ ಪ್ರಚಾರ ಕಾರ್ಯದಲ್ಲಿ ಸದ್ಯ ಅವರು ತೊಡಗಿಸಿಕೊಂಡಿದ್ದಾರೆ. ಶ್ರೀನಿ ನಿರ್ದೇಶನದ ‘ಘೋಸ್ಟ್’, ಅರ್ಜುನ್‌ ಜನ್ಯ ನಿರ್ದೇಶನದ ‘45’, ಯೋಗರಾಜ್‌ ಭಟ್‌ ನಿರ್ದೇಶನದ ‘ಕರಟಕ ದಮನಕ’ ಸಿನಿಮಾಗಳ ಚಿತ್ರೀಕರಣದಲ್ಲೂ ಶಿವರಾಜ್‌ಕುಮಾರ್‌ ತೊಡಗಿಸಿಕೊಂಡಿದ್ದಾರೆ. ತೆಲುಗು ಚಿತ್ರವೊಂದಕ್ಕೂ ಅವರು ಕಾಲ್‌ಶೀಟ್‌ ನೀಡಿದ್ದು, ದಿನ ಉರುಳಿದಂತೆ ಸೆಂಚುರಿ ಸ್ಟಾರ್‌ ಸಿನಿಮಾ ಬ್ಯಾಂಕ್‌ ಹಿಗ್ಗುತ್ತಲೇ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು