ಮಂಗಳವಾರ, ಮಾರ್ಚ್ 21, 2023
21 °C

ಹಿಗ್ಗಿದ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಸಿನಿಮಾ ಬ್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಸದ್ಯ ಚಂದನವನದ ಬ್ಯುಸಿಯೆಸ್ಟ್‌ ನಟ. ಅವರ ನಟನೆಯ 125ನೇ ಸಿನಿಮಾ ‘ವೇದ’ ಡಿಸೆಂಬರ್‌ನಲ್ಲಿ ತೆರೆಕಾಣಲು ಸಜ್ಜಾಗಿ ನಿಂತಿದೆ. ಇದರ ನಡುವೆ ‘ಘೋಸ್ಟ್’, ‘ನೀ ಸಿಗೋವರೆಗೂ’, ‘45’, ‘ಕರಟಕ ದಮನಕ’ ಸಿನಿಮಾಗಳ ಚಿತ್ರೀಕರಣದಲ್ಲೂ ಶಿವರಾಜ್‌ಕುಮಾರ್‌ ತೊಡಗಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಅವರು ಹಸಿರುನಿಶಾನೆ ಕೊಟ್ಟಿದ್ದಾರೆ.

ತೆಲುಗು ನಿರ್ದೇಶಕರೊಬ್ಬರು ಹೇಳಿರುವ ಕಥೆ ಕೇಳಿರುವ ಶಿವರಾಜ್‌ಕುಮಾರ್‌ ಅವರಿಗೆ ಕಾಲ್‌ಶೀಟ್‌ ನೀಡಿದ್ದಾರೆ. ಅಂದಹಾಗೆ ಶಿವರಾಜ್‌ಕುಮಾರ್‌ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ತೆಲುಗಿನ ಕಾರ್ತಿಕ್ ಅದ್ವೈತ್. ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ‘ಪಾಯುಮ್ ಒಲಿ ನೀ ಎನಕ್ಕು’ ಚಿತ್ರ ನಿರ್ದೇಶಿಸಿದ್ದ ಇವರು ಇದೀಗ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಇವರಿಗೆ ನಿರ್ದೇಶಕನಾಗಿ ಇದು ಎರಡನೇ ಸಿನಿಮಾ.

ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವರಾಜ್‌ಕುಮಾರ್‌ ವಿಭಿನ್ನ ಲುಕ್‌ ಹಾಗೂ ಪಾತ್ರದಲ್ಲಿ ಕಾಣಸಿಗಲಿದ್ದಾರೆ ಎಂದಿದೆ ಚಿತ್ರತಂಡ. ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾ ತಂಡ ತಲ್ಲೀನವಾಗಿದೆ. ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ. ಬಹುದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಚಿತ್ರದ ಶೀರ್ಷಿಕೆ, ನಾಯಕಿ, ತಾರಾಬಳಗ, ತಾಂತ್ರಿಕ ವರ್ಗ ಇದೆಲ್ಲವುದರ ಬಗ್ಗೆ ಮುಂಬರುವ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುವುದಾಗಿ ಕಾರ್ತಿಕ್ ತಿಳಿಸಿದ್ದಾರೆ.

ಶಿವರಾಜ್‌ಕುಮಾರ್‌ ಅಭಿನಯದ‌ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಹಾಗೂ
ತೆಲುಗಿನಲ್ಲಿ ‘ಆಫೀಸರ್’, ‘ಗುಡ್ ಲಕ್ ಸಖಿ’ ಸಿನಿಮಾ ನಿರ್ಮಿಸಿರುವ ನಿರ್ಮಾಪಕ ಸುಧೀರ್ ಚಂದ್ರ ಪಡಿರಿ ‘ಸುಧೀರ್ ಚಂದ್ರ ಫಿಲಂ ಕಂಪನಿ’ ಬ್ಯಾನರ್‌ನಡಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು