ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಶೋಲೆ' ಠಾಕೂರ್‌ ಜೀವನ ಚರಿತ್ರೆ

Last Updated 10 ನವೆಂಬರ್ 2019, 19:35 IST
ಅಕ್ಷರ ಗಾತ್ರ

ಹಿಂದಿ ಸಿನಿಮಾದ ಅತ್ಯುತ್ತಮ ನಟರ ಸಾಲಿನಲ್ಲಿ ಗುರುತಿಸಿಕೊಂಡಿದ್ದನಟ ಸಂಜೀವ್‌ ಕುಮಾರ್‌ ‘ಜೀವನ ಚರಿತ್ರೆ’ಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.

ಸಂಜೀವ್‌ ಕುಮಾರ್‌ ಸಹೋದರನ ಪುತ್ರ ಉದಯ್‌ ಜರಿವಾಲಾ ಮತ್ತು ಲೇಖಕಿ ರೀತಾ ಗುಪ್ತಾ ಜೀವನ ಚರಿತ್ರೆ ಬರೆಯಲು ಕುಳಿತಿದ್ದಾರೆ. ಮುಂದಿನ ನವೆಂಬರ್‌ ವೇಳೆಗೆ ಜೀವನ ಚರಿತ್ರೆ ಓದುಗರ ಕೈಯಲ್ಲಿರಲಿದೆ.

70–80ರ ದಶಕದಲ್ಲಿಹರಿಭಾಯಿ ಜರಿವಾಲಾ ಅಲಿಯಾಸ್‌ ಸಂಜೀವ್‌ ಕುಮಾರ್‌ ಮನೋಜ್ಞ ಅಭಿಯನದ ಮೂಲಕ ಮನೆಮಾತಾದ ನಟ.ದಸ್ತಕ್‌, ಕೋಶಿಶ್‌, ಆಂಧಿ, ಮೌಸಮ್‌ ಮತ್ತು ಅಂಗೂರ್‌ ಚಿತ್ರಗಳಲ್ಲಿ ಅವರು ನಿರ್ವಹಿಸಿದ ಪಾತ್ರಗಳು ಇಂದಿಗೂ ಕಾಡುತ್ತವೆ. ಹಿಂದಿ ಚಿತ್ರರಂಗದ ಬ್ಲಾಕ್‌ಬ್ಲಸ್ಟರ್‌ ‘ಶೋಲೆ’ಯಲ್ಲಿ ಅವರು ನಿರ್ವಹಿಸಿದ ಠಾಕೂರ್‌ ಪಾತ್ರವನ್ನು ಮರೆಯುವಂತಿಲ್ಲ.

1985ರಲ್ಲಿ ತಮ್ಮ 47ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಸಂಜೀವ್‌ ಕುಮಾರ್‌ ತಮ್ಮ ವಯಸ್ಸಿಗಿಂತ ಹಿರಿದಾದ ಮುದುಕರ ಪಾತ್ರಗಳನ್ನು ನಿರ್ವಹಿಸುವಲ್ಲಿ ಎತ್ತಿದ ಕೈ. ಎಂತಹ ಪಾತ್ರಗಳನ್ನಾದರೂ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಸಂಜೀವ್‌ ಕುಮಾರ್‌ ಜೀವನ ಕೇವಲ ಪುಸ್ತಕವಲ್ಲ, ಸಿನಿಮಾ ಅಥವಾ ವೆಬ್‌ ಸಿರೀಜ್‌ ಆಗಬೇಕು ಎನ್ನುವುದು ಲೇಖಕಿ ರೀತಾ ಗುಪ್ತಾ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT