ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ. 27ರಿಂದ ಕಿರು ಚಿತ್ರೋತ್ಸವ

Last Updated 21 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಸ್ಟೋನ್ಡ್‌ ಮಂಕಿ ಎಂಟರ್‌ಟೈನ್‌ಮೆಂಟ್‌ ವತಿಯಿಂದ ಇದೇ 27ರಂದು ಸಂಜೆ 7.30ಕ್ಕೆ ಬೆಂಗಳೂರಿನ ಕಬ್ಬನ್‌‍ಪಾರ್ಕ್‌ನಲ್ಲಿರುವ ಕೆಜಿಎಸ್‌ ಕ್ಲಬ್‌ನಲ್ಲಿ ಕಿರು ಚಿತ್ರೋತ್ಸವ ಆಯೋಜಿಸಲಾಗಿದೆ.

ಸಿನಿಮಾರಂಗ ಪ್ರವೇಶಿಸಲು ಇಚ್ಛಿಸುವ ಯುವ ನಿರ್ದೇಶಕರಿಗೆ ಪ್ರೋತ್ಸಾಹ ನೀಡುವುದು ಈ ಚಿತ್ರೋತ್ಸವದ ಗುರಿ. ನಟಿ ಸೋನು ಗೌಡ ಚಿತ್ರೋತ್ಸವದ ಪ್ರಚಾರಕಿಯಾಗಿದ್ದಾರೆ.

ಈಗಾಗಲೇ, 500ಕ್ಕೂ ಹೆಚ್ಚು ಕಿರುಚಿತ್ರಗಳು ಸ್ಪರ್ಧೆಗೆ ಬಂದಿವೆ. ಈ ಪೈಕಿ ಕನ್ನಡ ಕಿರುಚಿತ್ರಗಳ ಪಾಲು ಹೆಚ್ಚಿದೆ. ಸ್ಪರ್ಧೆಯಲ್ಲಿ ಅತ್ಯುತ್ತಮವಾದ 30 ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ. ದಯಾಳ್‌ ಪದ್ಮನಾಭನ್‌, ಗಿರಿಧರ್‌ ದಿವಾನ್, ರೋಹಿತ್‌ ಪದಕಿ ಮತ್ತು ಜೋಗಿ ಜ್ಯೂರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಿರುಚಿತ್ರಗಳ ಅವಧಿ 2 ನಿಮಿಷದಿಂದ 25 ನಿಮಿಷ. ₹ 500 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

‘ಹಿಂದಿನ ವರ್ಷ ನಡೆದ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಬಾರಿಯ ಸ್ಪರ್ಧೆಗೂ ಯುವ ನಿರ್ದೇಶಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. 2017ನೇ ಸಾಲಿನಡಿ ನಿರ್ಮಾಣವಾಗಿರುವ ಕಿರುಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತಿದೆ’ ಎಂದುಸ್ಟೋನ್ಡ್‌ ಮಂಕಿ ಎಂಟರ್‌ಟೈನ್‌ಮೆಂಟ್‌ನ ಮುಖ್ಯಸ್ಥ ಡಾ.ಆಶ್ಲೇಷ ತಿಳಿಸಿದ್ದಾರೆ.

ಅತ್ಯುತ್ತಮ ಕಿರುಚಿತ್ರ (ಕನ್ನಡ), ಅತ್ಯುತ್ತಮ ಕನ್ನಡೇತರ ಕಿರುಚಿತ್ರ, ಉತ್ತಮ ನಟ, ಉತ್ತಮ ನಟಿ, ಪೋಷಕ ನಟ/ನಟಿ, ಸಂಕಲನಕಾರ, ಛಾಯಾಗ್ರಹಣ, ಸಂಗೀತ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

‘ನಾನು ಹೆಚ್ಚಾಗಿ ಯುವ ನಿರ್ದೇಶಕರ ಚಿತ್ರಗಳಲ್ಲಿಯೇ ಕೆಲಸ ಮಾಡಿದ್ದೇನೆ. ಬಹುತೇಕರು ಸಿನಿಮಾ ರಂಗಕ್ಕೆ ಪ್ರವೇಶಿಸುವ ಮೊದಲು ಕಿರುಚಿತ್ರಗಳನ್ನು ನಿರ್ದೇಶನ ಮಾಡುತ್ತಾರೆ. ಅಲ್ಲಿ ಯಶಸ್ಸುಗಳಿಸಿದ ಬಳಿಕ ಸಿನಿಯಾನ ಆರಂಭಿಸಿದ್ದಾರೆ. ಹಾಗಾಗಿ, ಅವರಿಗೆ ಉತ್ತಮ ಪ್ರೋತ್ಸಾಹ ನೀಡಬೇಕಿದೆ. ಈ ನಿಟ್ಟಿನಲ್ಲಿ ಯುವ ನಿರ್ದೇಶಕರ ಪ್ರೋತ್ಸಾಹಕ್ಕೆ ಕಿರು ಚಿತ್ರೋತ್ಸವ ಉತ್ತಮ ವೇದಿಕೆಯಾಗಲಿದೆ’ ಎಂಬುದು ನಟಿ ಸೋನು ಗೌಡ ಅವರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT