ಮುಂಬೈ: ಗುಡಿ ಪಾಡ್ವಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿರುವ ಬಾಲಿವುಡ್ ನಟಿ ಶ್ರದ್ಧಾ ಕಪೂರ್, ಸಾಂಪ್ರದಾಯಿಕ ‘ನೌವರಿ’ ಸೀರೆ ಧರಿಸಿ ಮಿಂಚಿದ್ದಾರೆ.
ಸಡಗರ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಶ್ರದ್ಧಾ, ‘ನಾನು ‘ಗುಡಿ ಪಾಡ್ವಾ’, ‘ಚೇಟಿ ಚಂದ್’ ಮತ್ತು ಯುಗಾದಿಯೊಂದಿಗೆ ಹೊಸ ವರ್ಷವನ್ನು ಸಂತೋಷದಿಂದ ಪ್ರಾರಂಭಿಸಲು ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ನಾನು ಇಂದಿನ ದಿನವನ್ನು ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ಬಯಸುತ್ತೇನೆ ಎಂದಿದ್ದಾರೆ. ಫೋಟೊ ವೀಕ್ಷಿಸಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಣಬೀರ್ ಕಪೂರ್ ಜೊತೆಗೆ ಹೆಸರಿಡದ ಚಿತ್ರದಲ್ಲಿ ಶ್ರದ್ಧಾ ಕಾಣಿಸಿಕೊಳ್ಳಲಿದ್ದಾರೆ.