‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಜೊತೆಯಲ್ಲೇ, ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಕೂಡ ಶುರುವಾಗಿದೆ. ಚಿತ್ರದ ಟ್ರೇಲರ್ ಮೂಲಕ ಕಾಣಿಸಿರುವ ಚಿಕ್ಕದೊಂದು ಅಚ್ಚರಿ ಅಂದರೆ, ರಿಷಬ್ ಶೆಟ್ಟಿ ಪಾತ್ರ.

ಹೌದು, ರಕ್ಷಿತ್ ಅವರ ಬಹುತೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ರಿಷಬ್ ಅವರು ಭಾರಿ ಬಜೆಟ್ಟಿನ ಈ ಚಿತ್ರದಲ್ಲಿ ಯಾವ ಪಾತ್ರವನ್ನೂ ನಿಭಾಯಿಸಿಲ್ಲವೇ ಎಂಬ ಪ್ರಶ್ನೆ ಮೂಡಿತ್ತು. ಆದರೆ, ಆ ಪ್ರಶ್ನೆಗೆ ಟ್ರೇಲರ್ ಉತ್ತರ ನೀಡಿದೆ. ರಿಷಬ್ ಅವರು ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ರಿಷಬ್ ಅವರದ್ದು ಈ ಚಿತ್ರದಲ್ಲಿ ಕೌವ್‌ಬಾಯ್ ಕೃಷ್ಣ ಎನ್ನುವ ಚಿಕ್ಕ ಪಾತ್ರ. ಕೆಲವೇ ನಿಮಿಷಗಳ ಅವಧಿಯ ಪಾತ್ರ ಅದು’ ಎನ್ನುತ್ತಾರೆ ‘ಶ್ರೀಮನ್ನಾರಾಯಣ’ ಚಿತ್ರತಂಡದ ಸದಸ್ಯರೊಬ್ಬರು.

‘ರಿಷಬ್ ಮತ್ತು ರಕ್ಷಿತ್ ಅವರದ್ದು ಸಿನಿಮಾಗಳಿಗೆ ಮಾತ್ರ ಸೀಮಿತವಾದ ಸಂಬಂಧ ಅಲ್ಲ. ಅವರದ್ದು ಒಂದು ಬಗೆಯ ಭಾವನಾತ್ಮಕ ಸಂಬಂಧವೂ ಹೌದು. ಒಬ್ಬರ ಚಿತ್ರದಲ್ಲಿ ಇನ್ನೊಬ್ಬರು ಇರುತ್ತಾರೆ. ಈ ಚಿತ್ರದಲ್ಲಿಯೂ ರಿಷಬ್ ಚಿಕ್ಕ ಪಾತ್ರ ನಿಭಾಯಿಸಿದ್ದಾರೆ’ ಎನ್ನುತ್ತಾರೆ ಅವರ ಆಪ್ತರೊಬ್ಬರು.

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವ ರಿಷಬ್ ಅವರು, ತಮ್ಮ ‘ಬೆಲ್ ಬಾಟಂ’ ಸಿನಿಮಾದ ನೆನಪು ತಂದುಕೊಡುತ್ತಾರೆ. ‘ಬೆಲ್ ಬಾಟಂ’ ಸಿನಿಮಾದ ಮ್ಯಾನರಿಸಂ, ಈ ಚಿತ್ರದಲ್ಲೂ ಇದೆಯೇ ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತಾರೆ. ‘ಅವನೇ...’ ಚಿತ್ರ ಡಿಸೆಂಬರ್ 27ಕ್ಕೆ ತೆರೆಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.