ಹೊಸ ಸಿನಿಮಾದ ಖುಷಿಯಲ್ಲಿ ಶ್ರೀಯಾ

ಭಾನುವಾರ, ಜೂನ್ 16, 2019
28 °C

ಹೊಸ ಸಿನಿಮಾದ ಖುಷಿಯಲ್ಲಿ ಶ್ರೀಯಾ

Published:
Updated:
Prajavani

‘ನಾಗಸೂರನ್’ ಸಿನಿಮಾದ ಮೂಲಕ ಸದ್ದು ಮಾಡಿದ್ದ ಬೆಡಗಿ ಶ್ರೀಯಾ ಶರಣ್, ಈಗ ಮತ್ತೊಂದು ಸಿನಿಮಾದ ಸಂಭ್ರಮದಲ್ಲಿದ್ದಾರೆ. ಮಾದೇಶ್ ಮತ್ತು ವೇಮಲ್ ಜತೆಗೂಡಿ ನಿರ್ಮಿಸುತ್ತಿರುವ ‘ಸದಕ್ಕರಿ’ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಯಾ ಅಭಿನಯಿಸುತ್ತಿದ್ದಾರೆ.

ಕಳೆದ ವರ್ಷ ರಷ್ಯನ್ ಗೆಳೆಯನೊಂದಿಗೆ ಹಸೆಮಣೆ ಏರಿದ್ದ ಶ್ರೀಯಾ, ಮದುವೆಯಾದ ಮೇಲೂ ತಮ್ಮ ಬೇಡಿಕೆ ಉಳಿಸಿಕೊಂಡಿದ್ದಾರೆ. ಮಲಯಾಳಂನ ‘ಬಾಸ್’ ಸಿನಿಮಾದ ಮೂಲಕಥೆಯನ್ನು ಹೊಂದಿರುವ ‘ಸದಕ್ಕರಿ’ಯಲ್ಲಿ ಶ್ರೀಯಾ ಜೋಡಿ ಯಾರಾಗಲಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಬಹಿರಂಗವಾಗಿಲ್ಲ.

‘ಬಾಸ್’ನಲ್ಲಿ ದಿಲೀಪ್ ಮತ್ತು ಮಮತಾ ಮೋಹನ್ ದಾಸ್ ಜೋಡಿಯಾಗಿ ನಟಿಸಿದ್ದರು.  ಈಚೆಗಷ್ಟೇ ಶ್ರೀಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಸಿಬಿಸಿಯಾಗಿ ಕಾಣಿಸಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !