ಶುಕ್ರವಾರ, ಮೇ 27, 2022
31 °C

ನಿಮ್ಮ ತುಟಿಯ ಸೈಜ್‌ ಎಷ್ಟು? ನೆಟ್ಟಿಗನ ಪ್ರಶ್ನೆಗೆ ಶ್ರುತಿ ಹಾಸನ್‌ ಉತ್ತರವೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್‌ ಅವರು ಮತ್ತೊಮ್ಮೆ ನೆಟ್ಟಿಗರಿಂದ ಟ್ರೋಲ್‌ ಆಗಿದ್ದಾರೆ. ವಿಚಿತ್ರ ಪ್ರಶ್ನೆ ಕೇಳಿದ ನೆಟ್ಟಿಗರೊಬ್ಬರಿಗೆ ಸಮಾಧಾನದಿಂದ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಶ್ರುತಿ ಅವರು ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದಿದ್ದರು. ಅಭಿಮಾನಿಗಳಿಗೆ ಏನು ಬೇಕಾದರೂ ಕೇಳಬಹುದು ಎಂಬ ಲೈವ್‌ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ವೇಳೆ ಅಭಿಮಾನಿಗಳು ನಟಿಯ ಫಿಟ್ನೆಸ್‌, ಆಹಾರ, ಸೌಂದರ್ಯ, ಉಡುಪು, ಮುಂದಿನ ಸಿನಿಮಾಗಳು ಹಾಗೂ ಅವರ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಮತ್ತೆ ಕೆಲವರು ನಟಿಗೆ ಮುಜುಗರ ತರುವಂತಹ ಪ್ರಶ್ನೆಗಳನ್ನು ಹಾಕಿದ್ದರು.

ಇದೇ ಕಾರ್ಯಕ್ರಮದಲ್ಲಿ ನೆಟ್ಟಿಗರೊಬ್ಬರು ನಿಮ್ಮ ತುಟಿಗಳ ಸೈಜ್‌ ಎಷ್ಟು? ಎಂದು ಕೇಳಿದ್ದರು. ತುಟಿಗಳಿಗೂ ಸೈಜ್‌ ಇರುತ್ತಾ? ಎಂದು ಮರು ಪ್ರಶ್ನೆ ಹಾಕುವ ಮೂಲಕ ಶ್ರುತಿ ಸಮಾಧಾನದಿಂದಲೇ ಉತ್ತರ ನೀಡಿದ್ದರು. 

ಈ ವಿಚಾರದಲ್ಲಿ ಅವರು ಬಾಡಿ ಶೇಮಿಂಗ್‌ನಂತಹ ವಿಚಾರಗಳನ್ನು ಮಾತನಾಡದೇ ಸಮಾಧಾನದಿಂದ ಉತ್ತರ ಕೊಟ್ಟು, ಅಭಿಮಾನಿಗಳ ಬೇರೆ ಪ್ರಶ್ನೆಗಳನ್ನು ತೆಗೆದುಕೊಂಡಿದ್ದು ವಿಶೇಷ.

ಓದಿ... ಕೆಜಿಎಫ್ ಚಾಪ್ಟರ್-2: ಕೇವಲ 2 ದಿನದ ಕಲೆಕ್ಷನ್ ಕೇಳಿ ದಂಗಾದ ಚಿತ್ರರಂಗ!

ಈ ಹಿಂದೆ ಹಲವು ಸಲ ಆನ್‌ಲೈನ್‌ನಲ್ಲಿ ಬಾಡಿ ಶೇಮಿಂಗ್‌ ಪ್ರಶ್ನೆಗಳನ್ನು ಶ್ರುತಿ ಎದುರಿಸಿದ್ದರು. ಆ ಬಗ್ಗೆ ಬೇಸರ ವ್ಯಕ್ತಪಡಿಸಿ ಹಲವಾರು ಪೋಸ್ಟ್‌ಗಳನ್ನು ಅವರು ಪ್ರಕಟಿಸಿದ್ದರು. ಆದರೆ ಈ ವಿಚಾರದಲ್ಲಿ ಶ್ರುತಿ ನಡೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಶ್ರುತಿ ಅವರು ಪ್ರಬುದ್ಧತೆಯಿಂದ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.

ಓದಿ... ಚೆನ್ನೈನಲ್ಲಿ ಕನ್ನಡದಲ್ಲೇ ಕೆಜಿಎಫ್ ಸಿನಿಮಾ ವೀಕ್ಷಿಸಿದ ರಜನಿಕಾಂತ್: ಹೇಳಿದ್ದೇನು? 

ಸದ್ಯ ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದೆ. 

ಇದನ್ನೂ ಓದಿ: IPL | ಭಾರತ ತಂಡಕ್ಕೆ ಸೇರ್ಪಡೆಯಾಗಲು ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ: ಕಾರ್ತಿಕ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು