ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಲ ಹೂಪ್‌ ಬೇಬಿ ಶ್ರುತಿ ಹಾಸನ್‌ ನೃತ್ಯಕ್ಕೆ ಅಭಿಮಾನಿಗಳು ಫಿದಾ

ಅಕ್ಷರ ಗಾತ್ರ

ಚೆನ್ನೈ: ದಕ್ಷಿಣ ಭಾರತದ ಪ್ರತಿಭಾವಂತ ನಟಿ ಶ್ರುತಿ ಹಾಸನ್‌ 'ಹೂಲ ಹೂಪ್‌ ಬೇಬಿ'ಯಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ನಟನೆ, ಗಾಯನದ ಮೂಲಕ ಬಹುಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಶ್ರುತಿ ಹಾಸನ್‌ ಸದಾ ಫಿಟ್‌ನೆಸ್‌ ಕಾಯ್ದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಭಾನುವಾರವು ಎಂದಿನಂತೆ ವರ್ಕ್‌ಔಟ್‌ ಮಾಡಿದ ಶ್ರುತಿ ಹಾಸನ್‌ ಇನ್‌ಸ್ಟಾಗ್ರಾಂ ರೀಲ್‌ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ. 'ಎಲ್ಲವೂ ಚೆನ್ನಾಗಿ ಸಾಗಿದೆ. ಜೊತೆಗೆ ಕೂಲ್‌ ಆಗಿ ನಟಿಸಲು ಪ್ರಯತ್ನಿಸಿದ್ದೇನೆ' ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಪೀಟ್‌ ಆ್ಯಂಡರ್ಸನ್‌ ಮತ್ತು ದಿ ಸ್ವಾಂಪ್‌ ಶಾಖರ್ಸ್‌ ತಂಡದ ಹೂಲ ಹೂಪ್‌ ಬೇಬಿ ಹಿನ್ನೆಲೆ ಹಾಡಿಗೆ ವರ್ಕೌಟ್‌ ಮಾಡುತ್ತ, ನೃತ್ಯ ಮಾಡಿದ್ದಾರೆ.ವರ್ಕ್‌ಔಟ್‌ ವೇಳೆ 90ರ ದಶಕದ ಹಾಡುಗಳಿಗೆ ನೃತ್ಯ ಮಾಡುವ ಅಭ್ಯಾಸವನ್ನು ನಡೆಸುತ್ತಿರುವುದಾಗಿ ಇತ್ತೀಚೆಗೆ ಶ್ರುತಿ ಹಾಸನ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT