ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್‌ ಪಡೆದ ಮೊದಲ ಕಪ್ಪು ವರ್ಣೀಯ ನಟ ಸಿಡ್ನಿ ಪೊಯ್ಟಿಯರ್ ನಿಧನ

Last Updated 8 ಜನವರಿ 2022, 10:06 IST
ಅಕ್ಷರ ಗಾತ್ರ

ಹಾಲಿವುಡ್‌ ಸಿನಿಮಾ ‘ಲಿಲೀಸ್ ಆಫ್ ದಿ ಫೀಲ್ಡ್‌’ ಚಿತ್ರದ ಅತ್ಯುತ್ತಮ ನಟನೆಗೆ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪು ವರ್ಣೀಯ ನಟ ಸಿಡ್ನಿ ಪೊಯ್ಟಿಯರ್ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಜನಾಂಗೀಯ ಭೇದಹಾಗೂ ನಾಗರಿಕ ಹಕ್ಕುಗಳ ಚಳವಳಿ ಹೋರಾಟದಲ್ಲೂ ಅವರು ಗುರುತಿಸಿಕೊಂಡಿದ್ದರು. ಪೊಯ್ಟಿಯರ್ ನಟಿಸಿದ್ದ ‘ಗೆಸ್ ಹು ಈಸ್ ಕಮಿಂಗ್ ಟು ಡಿನ್ನರ್‌’, ‘ಹೀಟ್ ಆಫ್ ದಿ ನೈಟ್‌’, ‘ಟು ಸರ್, ವಿತ್ ಲವ್’ ಚಿತ್ರಗಳು ಹೆಚ್ಚು ಜನಪ್ರಿಯವಾಗಿದ್ದವು. ಇವು ಜನಾಂಗೀಯವಾದದ ಕುರಿತು ಬೆಳಕು ಚೆಲ್ಲಿದ್ದ ಸಿನಿಮಾಗಳು.

ಸಿಡ್ನಿ ಪೊಯ್ಟಿಯರ್ ಅಮೆರಿಕದ ಮಿಯಾಮಿಯಲ್ಲಿ 1927ರ ಫೆಬ್ರವರಿ 20ರಂದು ಜನಿಸಿದರು. ಔಪಚಾರಿಕ ಶಿಕ್ಷಣದ ಬಳಿಕ ಅವರು ಸಿನಿಮಾರಂಗ ಪ್ರವೇಶ ಮಾಡಿದರು. ಅವರಿಗೆ ಅಮೆರಿಕ ಸರ್ಕಾರ ಅತ್ಯುನ್ನತ ನಾಗರಿಕ ಗೌರವ ‘ಅಧ್ಯಕ್ಷಿಯ ಸ್ವಾತಂತ್ರ ಪದಕ’ ಪ್ರಶಸ್ತಿ ನೀಡಿದೆ.

ಪೊಯ್ಟಿಯರ್‌ ನಿಧನಕ್ಕೆ ಹಾಲಿವುಡ್‌ ಗಣ್ಯರು, ಅಮೆರಿಕದ ರಾಜಕಾರಣಿಗಳು ಸೇರಿದಂತೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT