ನಟ ಸಿಂಬು ಸುತ್ತ ವಿವಾದಗಳೇ ಈಗ ಸುತ್ತಿಕೊಳ್ಳುತ್ತಿವೆ. ನಟ ಶಿವರಾಜ್‌ಕುಮಾರ್ ಅಭಿನಯದ ‘ಮಫ್ತಿ’ ಕನ್ನಡ ಸಿನಿಮಾದ ರಿಮೇಕ್‌ನಿಂದ ಸಿಂಬು ಹಿಂದಕ್ಕೆ ಸರಿದಿದ್ದಾರೆ. ನಿರ್ಮಾಪಕ ನಾವೆಲ್ ರಾಜ ಅವರು ಸಿಂಬು ವಿರುದ್ಧ ತಮಿಳುನಾಡು ಸಿನಿಮಾ ನಿರ್ಮಾಪಕರ ಸಂಘಕ್ಕೆ ದೂರು ಕೊಟ್ಟಿದ್ದಾರೆ.

‘ಮಫ್ತಿ’ ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದೆ ಹಾಗೂ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸಿಂಬು ಹಾಗೂ ಗೌತಮ್ ಅಭಿನಯಿಸುತ್ತಿದ್ದಾರೆ ಎಂದು ಕಳೆದ ಜೂನ್ ತಿಂಗಳಲ್ಲಿ ಘೋಷಣೆ ಮಾಡಿದ್ದರು. ಚಿತ್ರದ ಚಿತ್ರೀಕರಣವೂ ಆರಂಭವಾಗಿದ್ದು, ಇಬ್ಬರೂ ನಟರು ಚಿತ್ರೀಕರಣದ ಸೆಟ್‌ನಿಂದ ಸೆಲ್ಫಿಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಈಗ ಸಿಂಬು ಅವರು ಚಿತ್ರದ ಚಿತ್ರೀಕರಣಕ್ಕೆ ಬರುವುದಿಲ್ಲ, ಹಾಗಾಗಿ ಸಿನಿಮಾ ತಡವಾಗುತ್ತಿದೆ ಎಂದು ನಿರ್ಮಾಪಕರು ದೂರು ನೀಡಿದ್ದಾರೆ.

ಕೆಲವು ತಿಂಗಳ ಹಿಂದೆ ಮತ್ತೊಂದು ಚಿತ್ರದಿಂದ ಸಿಂಬು ಹಿಂದಕ್ಕೆ ಸರಿದಿದ್ದರು. ವೆಂಕಟ್ ಪ್ರಭು ನಿರ್ದೇಶನದ ಮಾನಡು ಚಿತ್ರದ ಕೆಲಸಕ್ಕೂ ಅವರು ಹೀಗೆಯೇ ವರ್ತಿಸಿದ್ದರು. ಇದು ಕೂಡ ದೊಡ್ಡ ಸುದ್ದಿಯಾಗಿತ್ತು.

ಇದನ್ನೂ ಓದಿ:ಮೋಡಿ ಮಾಡಿದ ನೃತ್ಯದ ಝಲಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.