ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ್ ನಟನೆಯ ಅವತಾರ ಪುರುಷ–2 ಬಿಡುಗಡೆ ದಿನಾಂಕ ಘೋಷಿಸಿದ ಸಿಂಪಲ್ ಸುನಿ

ಶರಣ್ ಮುಖ್ಯಪಾತ್ರದಲ್ಲಿರುವ ಸಿಂಪಲ್ ಸುನಿ ನಿರ್ದೇಶನದ 'ಅವತಾರ ಪುರುಷ–2' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
Published 2 ಮಾರ್ಚ್ 2024, 10:50 IST
Last Updated 2 ಮಾರ್ಚ್ 2024, 10:50 IST
ಅಕ್ಷರ ಗಾತ್ರ

ಬೆಂಗಳೂರು: ಶರಣ್ ಮುಖ್ಯಪಾತ್ರದಲ್ಲಿರುವ ಸಿಂಪಲ್ ಸುನಿ ನಿರ್ದೇಶನದ 'ಅವತಾರ ಪುರುಷ–2' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಇದೇ ಮಾರ್ಚ್ 22 ರಂದು ಚಿತ್ರಮಂದಿರಗಳಲ್ಲಿ ಅವತಾರ ಪುರುಷ–2 ಬಿಡುಗಡೆಯಾಗಲಿದೆ ಎಂದು ಸಿಂಪನ್ ಸುನಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕಾಯುವಿಕೆಯ ಅಂತ್ಯ .. ಹೊಸ ಯುಗದ ಅನಾವರಣ.. ಎಂದು ಹೇಳಿದ್ದಾರೆ. ಇದು ತ್ರಿಶಂಕು ಪಯಣ ಎಂದು ಪೋಸ್ಟರ್‌ಗೆ ಒಕ್ಕಣಿಕೆ ಸೇರಿಸಿದ್ದಾರೆ.

ಚಿತ್ರದಲ್ಲಿ ಮಾಟ, ಮಂತ್ರದ ಸುತ್ತ ಕಥೆ ಹೆಣೆಯಲಾಗಿದೆ. ಅದಕ್ಕೆ ಹದವಾಗಿ ಹಾಸ್ಯದ ಲೇಪನ ಹಚ್ಚಲಾಗಿದೆ. ಇದೊಂದು ಪಕ್ಕಾ ಹಾರರ್‌, ಕಾಮಿಡಿ ಕಥೆ.

ಮೊದಲ ಭಾಗದಲ್ಲಿ ಶರಣ್‌ ಅವರದ್ದು ಜೂನಿಯರ್‌ ಕಲಾವಿದನ ಪಾತ್ರ. ಹಾಗಾಗಿ, ಇಲ್ಲೂ ಕೂಡ ವಿಭಿನ್ನ ಅವತಾರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಆಶಿಕಾ ರಂಗನಾಥ್‌ ಅವರದ್ದು ಎನ್ಆರ್‌ಐ ಪಾತ್ರ ಇತ್ತು. ಎರಡನೇ ಭಾಗದಲ್ಲಿ ಆಶಿಕಾ ರಂಗನಾಥ್‌ ಅವರೂ ಇರಲಿದ್ದಾರೆ ಎನ್ನಲಾಗಿದೆ.

ಅವತಾರ ಪುರುಷ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಬಿಡುಗಡೆಯಾಗಿ ಅಷ್ಟೊಂದು ಸದ್ದು ಮಾಡಿರಲಿಲ್ಲ. ಕೆಲವೇ ದಿನಗಳಲ್ಲಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿತ್ತು.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಳಪ್ಪಮನ್ನ, ಮಡಿಕೇರಿ ಮತ್ತು ಬೆಂಗಳೂರಿನ ಹೆಸರಘಟ್ಟದ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಪುಷ್ಕರ್‌ ಫಿಲ್ಮ್ಸ್‌ನಡಿ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಇದಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನು ಈ ಚಿತ್ರ ಐಪಿಎಲ್ ಪಂದ್ಯಗಳ ನಡುವೆಯೇ ಬಿಡುಗಡೆಯಾಗುತ್ತಿದೆ. ಇದಕ್ಕೆ ಶರಣ್ ಅಭಿಮಾನಿಗಳು ಐಪಿಎಲ್ ಟೂರ್ನಿ ವೇಳೆ ಚಿತ್ರ ಬಿಡುಗಡೆ ಮಾಡುತ್ತಿರುವುದು ಏಕೆ? ಇದರಿಂದ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಬಹುದು. ಹಾಗಾಗಿ ಬಿಡುಗಡೆ ದಿನಾಂಕ ಮುಂದೂಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT