ಇದೊಂದು ಪರೀಕ್ಷೆಯ ಸಮಯ. ಮೊದಲು ಒಂದು ಅವರೇಜ್ ಸಿನಿಮಾಗೂ ಗಳಿಕೆ ಇತ್ತು. ಹಕ್ಕುಗಳ ಮಾರಾಟದಿಂದ ವಹಿವಾಟು ಆಗಿಬಿಡುತ್ತಿತ್ತು. ಈಗ ಬಿಡುಗಡೆ ಮೊದಲು ಯಾವ ವಹಿವಾಟು ಆಗುತ್ತಿಲ್ಲ. ಒಳ್ಳೆಯ ಸಿನಿಮಾಗಳು ಬಂದಾಗ ಜನರು ಖಂಡಿತವಾಗಿಯೂ ನೋಡುತ್ತಾರೆ. ಇತ್ತೀಚೆಗೆ ಸೆಲಿಬ್ರಿಟಿ ಶೋಗಳಷ್ಟೇ ಹೌಸ್‌ಫುಲ್ ಆಗುತ್ತಿದೆ. ಮುಂದೆ ‘45’ ‘ಕೆಡಿ’ಯಂಥ ಹಲವು ನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಮತ್ತೆ ಚಿತ್ರಮಂದಿರಗಳು ತುಂಬಿಕೊಳ್ಳಬಹುದು ಎನ್ನುವ ನಿರೀಕ್ಷೆ ಇದೆ