ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಕಿ ಈಶಾನಿ ಹಾಡಿರುವ ‘ಫ್ರೀಡಮ್’ ಅಲ್ಬಮ್ ಸಾಂಗ್ ಬಿಡುಗಡೆ

Published 31 ಆಗಸ್ಟ್ 2023, 19:30 IST
Last Updated 31 ಆಗಸ್ಟ್ 2023, 19:30 IST
ಅಕ್ಷರ ಗಾತ್ರ

ಗಾಯಕಿ ಈಶಾನಿ ಹಾಡಿರುವ ‘ಫ್ರೀಡಮ್’ ಆಲ್ಬಮ್‌ ಸಾಂಗ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಈಶಾನಿ ಅವರ ಕನ್ನಡ ಕಾರ್ಯಕ್ಕೆ ನಟರಾದ ಶಿವರಾಜ್‌ ಕುಮಾರ್‌, ದರ್ಶನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದು ಈಶಾನಿ ಅವರ ಮೂರನೇ ಕನ್ನಡ ಆಲ್ಬಮ್‌ ಸಾಂಗ್‌. ಈ ಹಿಂದೆ ‘ರೈಟರ್’, ‘ಊರ್ಮಿಳ’ ಆಲ್ಬಮ್‌ ಹಾಡುಗಳಿಗೆ ಈಶಾನಿ ಧ್ವನಿಯಾಗಿದ್ದರು. ‘ಫ್ರೀಡಮ್’ ಗೀತೆಗೆ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಸ್ವರ ಸಂಯೋಜಿಸಿ, ಸಾಹಿತ್ಯ ಬರೆದಿದ್ದಾರೆ.

‘ಮೂಲತಃ ಮೈಸೂರಿನವಳಾದ ನಾನು 13ನೇ ವರ್ಷದಿಂದ ಹಾಡುತ್ತಿರುವೆ. ಈಗಾಗಲೇ 17 ಇಂಗ್ಲೀಷ್ ಅಲ್ಬಮ್ ಸಾಂಗ್‌ಗಳು ಬಿಡುಗಡೆಗೊಂಡಿವೆ. 2016ರಲ್ಲಿ ಮೊದಲು ಹಾಡನ್ನು ಬರೆದು ನಾನೇ ಹಾಡಿದೆ. ಈಗ ಸಿನಿಮಾದಲ್ಲಿ ನಟಿಸಲು ಸಿದ್ಧತೆ ನಡೆಸಿರುವೆ. ಜೊತೆಗೆ ಸಿನಿಮಾದಲ್ಲಿಯೂ ಹಾಡುವೆ’ ಎಂದರು.

ಇದೇ ಸಂದರ್ಭದಲ್ಲಿ ಈ ಗೀತೆಯ ನಿರ್ದೇಶಕ ಗಿರಿ ಗೌಡ ಅವರು ಆ್ಯಕ್ಷನ್–ಕಟ್ ಹೇಳಲಿರುವ ‘ಥಗ್ಸ್ ಆಫ್ 1980’ ಚಿತ್ರದ ಶೀರ್ಷಿಕೆ ಕೂಡ ಬಿಡುಗಡೆಗೊಳಿಸಲಾಯಿತು. ಈ ಗೀತೆಯನ್ನು ಎ.ಎಸ್ ಪ್ರೋಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿರುವ ವೆಂಕಟ್ ಅವರೇ ಚಿತ್ರದ ನಿರ್ಮಾಣ ಕೂಡ ಮಾಡುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT