ಶನಿವಾರ, ಆಗಸ್ಟ್ 13, 2022
26 °C

ಟೀಸರ್‌ನಲ್ಲೇ ‘ಧೂಳೆಬ್ಬಿಸಿದ್ದ ‘ಸೀತಾ ರಾಮಂ‘: ದುಲ್ಕರ್, ರಶ್ಮಿಕಾ ಲವ್ ಕಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲಯಾಳಂ ಖ್ಯಾತ ನಟ ದುಲ್ಕರ್ ಸಲ್ಮಾನ್ ಅಭಿನಯದ ‘ಸೀತಾ ರಾಮಂ‘ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. 

ಟಾಲಿವುಡ್ ಪ್ರೊಡಕ್ಷನ್ ಹೌಸ್‌ನ ವೈಜಯಂತಿ ಮೂವೀಸ್‌ನ ಬಹು ನಿರೀಕ್ಷಿತ ರೊಮ್ಯಾಂಟಿಕ್‌ ಹಾಗೂ ಸಾಹಸ ಇರುವ 'ಸೀತಾ ರಾಮಂ' ಚಿತ್ರವನ್ನು ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ. ದುಲ್ಕರ್ ಸಲ್ಮಾನ್ ಅವರಿಗೆ ಜೋಡಿಯಾಗಿ ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. 

ಟೀಸರ್‌ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದುಲ್ಕರ್‌ ಸಲ್ಮಾನ್‌ ಕಾಶ್ಮೀರ ಕಣಿವೆಯಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಅವಿವಾಹಿತರಾದ ಅವರಿಗೆ ಒಂದು ದಿನ ಹೆಂಡತಿ ಎಂದು ಹೇಳಿಕೊಳ್ಳುವ ಸೀತಾ ಮಹಾಲಕ್ಷ್ಮಿ ಪತ್ರ ಬರೆಯುತ್ತಾರೆ. ಮುಂದೆ ಏನಾಗುತ್ತದೆ ಎಂಬುದು ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ. 

ಸೀತಾ ರಾಮಂ ಚಿತ್ರ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಈ ಸಿನಿಮಾ ಆಗಸ್ಟ್ 5 ರಂದು ಬಿಡುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು