ಬಾಡಿಗೆ ತಾಯಿ ಮೂಲಕ ಸಲ್ಮಾನ್‌ಗೆ ಮಗು?

ಭಾನುವಾರ, ಮೇ 26, 2019
27 °C

ಬಾಡಿಗೆ ತಾಯಿ ಮೂಲಕ ಸಲ್ಮಾನ್‌ಗೆ ಮಗು?

Published:
Updated:
Prajavani

ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎನಿಸಿಕೊಂಡಿರುವ ಸಲ್ಮಾನ್ ಖಾನ್‌ ಒಂದರ ಹಿಂದೊಂದು ಹಿಟ್ ಚಿತ್ರಗಳನ್ನು ನೀಡಿ ಜನಮನ ಗೆದ್ದವರು. ಅವರು ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷಗಳು ಸಂದಿವೆ. ವಯಸ್ಸೂ 53 ದಾಟಿದ್ದರೂ ಇನ್ನೂ ಮದುವೆಯಾಗಿಲ್ಲ. ಹಾಗಂತ ಮದುವೆ, ಮಕ್ಕಳ ಬಗ್ಗೆ ಅವರಿಗೆ ಯೋಚನೆ ಇಲ್ಲ ಅಂತಲ್ಲ. 

ಇದೀಗ ಬಂದಿರುವ ಸುದ್ದಿ ಎಂದರೆ, ಸಲ್ಮಾನ್ ಅವರು ತಂದೆಯಾಗಲು ಹೊರಟಿರುವುದು. ಅರೆ ಮದುವೆಯಾಗದೇ ತಂದೆ ಆಗೋದು ಹೇಗೆ ಎಂಬ ಅಚ್ಚರಿ ಮೂಡಬಹುದು. ಬಾಡಿಗೆ ತಾಯಿಯ ಮೂಲಕ ಅವರು ಮಗು ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅವರ ಬಗ್ಗೆ ಎರಡು ವರ್ಷದ ಹಿಂದೆಯೂ ಇಂತಹದ್ದೇ ಸುದ್ದಿ ಹರಡಿತ್ತು.

ಮಕ್ಕಳೆಂದರೆ ಸಲ್ಮಾನ್‌ಗೆ ಅಚ್ಚುಮೆಚ್ಚು. ಆದರೆ ಮದುವೆಯ ಬಗ್ಗೆ ಅವರು ಮನಸು ಮಾಡಿಲ್ಲ. ಆದರೆ ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಇದು ನಿಜವಾದಲ್ಲಿ, ಶಾರುಕ್ ಖಾನ್, ಅಮೀರ್ ಖಾನ್, ಏಕ್ತಾ ಕಪೂರ್, ಕರಣ್ ಜೋಹರ್ ಸಾಲಿಗೆ ಬ್ಯಾಡ್‌ ಬಾಯ್ ಕೂಡಾ ಸೇರ್ಪಡೆಯಾಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !