ಬುಧವಾರ, ಡಿಸೆಂಬರ್ 8, 2021
23 °C

ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಲಮ್‌ಡಾಗ್ ಮಿಲಿಯನೇರ್ ನಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Frieda Pinto Instagram Post

ಬೆಂಗಳೂರು: ಅಸ್ಕರ್ ಪುರಸ್ಕೃತ ‘ಸ್ಲಮ್ ಡಾಗ್ ಮಿಲಿಯನೇರ್‌’ ಚಿತ್ರದ ನಟಿ ಫ್ರೀಡಾ ಪಿಂಟೋ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಮಂಗಳೂರು ಮೂಲದ ಫ್ರೀಡಾ ಪಿಂಟೋ, ಲಂಡನ್‌ನಲ್ಲಿ ನೆಲೆಸಿದ್ದಾರೆ.

2008ರಲ್ಲಿ ತೆರೆಕಂಡ ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರದ ಮೂಲಕ ಫ್ರೀಡಾ ಪಿಂಟೋ ಜನಪ್ರಿಯತೆ ಗಳಿಸಿದ್ದಾರೆ.

ನಟ ದೇವ್ ಪಟೇಲ್ ಜತೆ ಡೇಟಿಂಗ್ ನಡೆಸುತ್ತಿದ್ದ ಫ್ರೀಡಾ, 2014ರಲ್ಲಿ ಪ್ರತ್ಯೇಕವಾಗಿದ್ದರು. ಬಳಿಕ 2019ರಲ್ಲಿ ಫೋಟೊಗ್ರಾಫರ್ ಕಾರಿ ಟ್ರಾನ್ ಜತೆ ಸಂಬಂಧ ಮುಂದುವರಿಸಿದ್ದಾರೆ. ಈ ದಂಪತಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಹುಟ್ಟುಹಬ್ಬದ ಜತೆಗೇ ತಾಯ್ತನದ ಖುಷಿ ಅನುಭವಿಸಲು ಸಜ್ಜಾಗಿದ್ದೇನೆ ಎಂದು ಫ್ರೀಡಾ ಪಿಂಟೋ ಹೇಳಿಕೊಂಡಿದ್ದು, ಬೇಬಿ ಶವರ್ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು