ಶುಕ್ರವಾರ, ಜನವರಿ 27, 2023
17 °C

‘ಎಸ್‌ಎಲ್‌ವಿ’ಗೆ ಒಮಾನ್‌ನಲ್ಲಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೌರಭ್ ಕುಲಕರ್ಣಿ ನಿರ್ದೇಶನದ ‘ಸಿರಿ ಲಂಬೋದರ ವಿವಾಹ’ (ಎಸ್ಎಲ್‌ವಿ) ಚಿತ್ರ ಒಮಾನ್ ದೇಶದ ಸೋಹಾರ್ ಮತ್ತು ಮಸ್ಕತ್ ನಗರಗಳಲ್ಲಿ ವಿಶೇಷ ಪ್ರದರ್ಶನ ಕಂಡಿತು. ಎರಡೂ ನಗರಗಳ ಕನ್ನಡ ಸಂಘಗಳ ಸಹಕಾರದೊಂದಿಗೆ ಸುಮಾರು 400 ಜನ ಚಲನಚಿತ್ರ ವೀಕ್ಷಿಸಿದರು.

ಇದೊಂದು ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್ ಚಿತ್ರ. ಇದರಲ್ಲಿನ ಸಸ್ಪೆನ್ಸ್ ಕಥಾಹಂದರವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಇದೊಂದು ಬೇರೆ ತರಹದ ಚಿತ್ರ ಮತ್ತು ಇತ್ತೀಚಿನ ದಿನಗಳಲ್ಲಿ ಇಂತಹ ಹಾಸ್ಯ-ಕುತೂಹಲ ಮಿಶ್ರಿತ ಸಿನಿಮಾ ನೋಡಿರಲಿಲ್ಲ ಎನ್ನುವುದು ಅನಿವಾಸಿ ಕನ್ನಡಿಗರ ಅಭಿಪ್ರಾಯ ಎಂದರು ನಿರ್ದೇಶಕ ಸೌರಭ್‌.

ಅಂಜನ್ ಎ. ಭಾರದ್ವಾಜ್ - ದಿಶಾ ರಮೇಶ್ ನಾಯಕ-ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜೇಶ್ ನಟರಂಗ, ಸುಂದರ್ ವೀಣಾ, ಬಲ ರಾಜವಾಡಿ, ಪಿ.ಡಿ.ಸತೀಶ್ ಚಂದ್ರ ತಾರಾಗಣದಲ್ಲಿದ್ದಾರೆ. ವರ್ಸ್ಯಾಟೋ ವೆಂಚರ್ಸ್, ಪವಮಾನ ಕ್ರಿಯೇಷನ್ಸ್, ಫೋರೆಸ್ ನೆಟ್ ವರ್ಕ್ ಸೊಲೂಷ್ಯನ್ಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗಿದೆ. ಇನ್ನು ಎರಡು ತಿಂಗಳಲ್ಲಿ ರಾಜ್ಯದಲ್ಲಿ ಈ ಚಿತ್ರ ತೆರೆ ಕಾಣಲಿದೆ ಎಂದರು ಅವರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.