ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಿತ್ರ ಉಡುಗೆಗಳಿಗೆ ಹೆಸರಾಗಿರುವ ಉರ್ಫಿ ಜಾವೇದ್‌ ಬಂಧನ?

Published 3 ನವೆಂಬರ್ 2023, 7:20 IST
Last Updated 3 ನವೆಂಬರ್ 2023, 7:20 IST
ಅಕ್ಷರ ಗಾತ್ರ

ಮುಂಬೈ: ವಿಚಿತ್ರ ಉಡುಗೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತರಾಗಿದ್ದ ಮಾಡೆಲ್‌ ಉರ್ಫಿ ಜಾವೇದ್‌ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಮುಂಬೈ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ. 

ತುಂಡುಡುಗೆಗಳನ್ನು ಧರಿಸಿ ಸಾರ್ವಜನಿಕವಾಗಿ ಓಡಾಡಿದ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. viralbhayani ಎನ್ನುವ ಇನ್‌ಸ್ಟಾಗ್ರಾಮ್‌ ಖಾತೆ ಉರ್ಫಿ ಅವರನ್ನು ಪೊಲೀಸರು ಕರೆದೊಯ್ದ ವಿಡಿಯೊವೊಂದನ್ನು ಕೂಡ ಹಂಚಿಕೊಂಡಿದೆ. 

ಪೊಲೀಸರು ಕರೆದೊಯ್ಯುವ ವೇಳೆ ‘ಯಾಕೆ ನನ್ನನ್ನು ಕರೆದೊಯ್ಯುತ್ತಿದ್ದೀರಿ’ ಎಂದು ಉರ್ಫಿ ಕೂಗಿದ್ದಾರೆ, ಅದಕ್ಕೆ ಪೊಲೀಸರು ‘ಇಷ್ಟು ಸಣ್ಣ ಬಟ್ಟೆಯನ್ನು ಯಾರು ಧರಿಸುತ್ತಾರೆ’ ಎಂದು ಜೀಪ್‌ ಹತ್ತಿಸಿಕೊಂಡಿದ್ದಾರೆ.

ಇತ್ತೀಚೆಗೆ ಉರ್ಫಿ ಅವರು ಕಿವಿಗೆ ಅಗರಬತ್ತಿಯನ್ನು ಸಿಕ್ಕಿಸಿಕೊಂಡು ಕೆಂಪು ಉಡುಗೆ ತೊಟ್ಟು ವಿಚಿತ್ರವಾಗಿ ಕಾಣುವಂತೆ ವಿಡಿಯೊ ಮಾಡಿ ಹಂಚಿಕೊಂಡಿದ್ದರು. ಆ ಬಳಿಕ ಉರ್ಫಿಗೆ ಕೊಲೆ ಬೆದರಿಕೆ ಎನ್ನುವ ಸುದ್ದಿಯೂ ಹರಿದಾಡಿತ್ತು.

ಇದೀಗ ರೆಸ್ಟೋರೆಂಟ್‌ವೊಂದರಿಂದ ಇಬ್ಬರು ಮಹಿಳಾ ಪೊಲೀಸ್‌ ಅಧಿಕಾರಿಗಳು ಉರ್ಫಿ ಅವರನ್ನು ಜೀಪ್‌ಗೆ ಹತ್ತಿಸಿಕೊಂಡು ಹೋದ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT