ಭಾನುವಾರ, ಮೇ 22, 2022
21 °C

ಸಲ್ಮಾನ್ ಖಾನ್‌ಗೆ ಟೀಕೆ: ಸೋಫಿಯಾ ಹಯಾತ್‌ಗೆ ಇನ್‌ಸ್ಟಾಗ್ರಾಂನಲ್ಲಿ ಬೆದರಿಕೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Sofia Hayat Instagram

ಬೆಂಗಳೂರು: ನಟ ಸಲ್ಮಾನ್ ಖಾನ್ ಪ್ರತಿಯೊಂದು ಹಬ್ಬದ ಸಮಯದಲ್ಲೂ ಒಂದು ಚಿತ್ರವನ್ನು ಬಿಡುಗಡೆ ಮಾಡುವ ತಂತ್ರ ಅನುಸರಿಸುತ್ತಾರೆ. ಅವರು ಧಾರ್ಮಿಕ ಹಬ್ಬದ ಸಂದರ್ಭದಲ್ಲಿ ತನ್ನ ಚಿತ್ರದ ಪ್ರಚಾರ ಮಾಡುವ ಮೂಲಕ ಆದಾಯ ಗಳಿಸುತ್ತಾರೆ ಎಂದು ನಟಿ ಹಾಗೂ ಬಿಗ್‌ ಬಾಸ್ ಮಾಜಿ ಸ್ಪರ್ಧಿ ಸೋಫಿಯಾ ಹಯಾತ್ ಟೀಕಿಸಿದ್ದಾರೆ.

ಅಲ್ಲದೆ, ಸಲ್ಮಾನ್ ಯಾವತ್ತೂ ತನಗಿಂತ ಬಹಳಷ್ಟು ಕಿರಿಯ ವಯಸ್ಸಿನ ನಟಿಯರೊಂದಿಗೆ ತೆರೆ ಹಂಚಿಕೊಳ್ಳುತ್ತಾರೆ, ಸಲ್ಮಾನ್ ಯಾಕೆ ತನ್ನ ಸಮಕಾಲೀನ ನಟಿಯರೊಂದಿಗೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಬಾರದು ಎಂದು ಸೋಫಿಯಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು.

 

ಇದರ ಬೆನ್ನಲ್ಲೇ ಸಲ್ಮಾನ್ ಖಾನ್ ಅಭಿಮಾನಿಗಳು ನಟಿ ಸೋಫಿಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಲ್ಮಾನ್ ಹೆಸರು ಬಳಸಿಕೊಂಡು ಸೋಫಿಯಾ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಸಲ್ಮಾನ್ ಜತೆ ನಟಿಸುವ ಯೋಗ್ಯತೆ ಆಕೆಗಿಲ್ಲ ಎಂದು ಸಲ್ಲು ಅಭಿಮಾನಿಗಳು ಕಮೆಂಟ್ ಮೂಲಕ ಸೋಫಿಯಾರನ್ನು ಟೀಕಿಸಿದ್ದಾರೆ.

ಸಲ್ಮಾನ್ ಅಭಿಮಾನಿಗಳ ಟೀಕೆ, ಬೈಗುಳ ಕುರಿತು ಸೋಫಿಯಾ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿದ್ದು, ಸಲ್ಮಾನ್ ಅಭಿಮಾನಿಗಳ ಈ ವರ್ತನೆಯಿಂದ ನನಗೇನೂ ಅಚ್ಚರಿಯಾಗಿಲ್ಲ ಎಂದಿದ್ದಾರೆ. ಅವರು ಮಾತನಾಡುವುದೇ ಹೀಗೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು