ಶನಿವಾರ, ಡಿಸೆಂಬರ್ 7, 2019
24 °C

'ಮಿಷನ್‌ ಮಂಗಲ್‌' ತಂಡಕ್ಕೆ ನಾಯಕಿ ನಟಿ ಸೋನಾಕ್ಷಿ ಅಭಿನಂದನೆ

Published:
Updated:
Prajavani

‘ಮಿಷನ್‌ ಮಂಗಲ್‌’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ₹200 ಕೋಟಿ ಗಳಿಸಿದೆ. ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ನಟಿ ಸೋನಾಕ್ಷಿ ಸಿನ್ಹಾ ತಮ್ಮ ತಂಡಕ್ಕೆ ಶುಭಾಶಯ ಕೋರಿದ್ದಾರೆ.

‘ಜಗನ್‌ ಶಕ್ತಿ ನಿರ್ದೇಶನದ ಈ ಸಿನಿಮಾ, ವಿಜ್ಞಾನಿಗಳ ಸಾಧನೆಯನ್ನು ಎತ್ತಿಹಿಡಿಯವ ಪ್ರಯತ್ನ ಮಾಡಿದೆ. ಇದಕ್ಕೆ ಪ್ರೇಕ್ಷಕರ ಸ್ಪಂದನೆ ಕೂಡ ಚೆನ್ನಾಗಿದೆ’ ಎಂದು ಸೋನಾಕ್ಷಿ ಟ್ವೀಟ್ ಮಾಡಿದ್ದಾರೆ.

‘₹200 ಕೋಟಿ ಕೇವಲ ಸಂಗ್ರಹವಾದ ಹಣ ಅಷ್ಟೇ. ನಮ್ಮ ಸಿನಿಮಾ ಸಾಕಷ್ಟು ಜನರ ಮನಸ್ಸನ್ನು ಗೆದ್ದಿರುವುದು ಖುಷಿಯ ವಿಷಯ’ ಎಂದು ಸೋನಾಕ್ಷಿ ಹೇಳಿದ್ದಾರೆ. ಇದಕ್ಕೆ ನಟ ಅಕ್ಷಯ್‌ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ. ‘ಇಸ್ರೊ’ ತಂಡಕ್ಕೆ ನಾವು ಧನ್ಯವಾದ ಹೇಳಲೇಬೇಕು. ಅವರ ಸಹಕಾರ ಇಲ್ಲದೇ ನಮ್ಮ ಸಿನಿಮಾ ಅಪೂರ್ಣ. ಅವರ ಸಾಧನೆಯನ್ನು ನಾವು ತೆರೆಮೇಲೆ ತೋರಿಸುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ’ ಎಂದು ಅವರು ಬರೆದಿದ್ದಾರೆ. ವಿದ್ಯಾ ಬಾಲನ್‌, ತಾಪ್ಸಿ ಪನ್ನು, ಕೃತಿ ಕಲ್ಹಾರಿ, ನಿತ್ಯಾ ಮೆನನ್‌ ಅಭಿನಯಿಸಿರುವ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು