ಭಾನುವಾರ, ನವೆಂಬರ್ 17, 2019
29 °C

ಬಹುಮುಖಿ ಪಾತ್ರಗಳಲ್ಲಿ ಸೋನಾಕ್ಷಿ ಸಿನ್ಹಾ

Published:
Updated:
Prajavani

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಈ ವರ್ಷ ಸಾಕಷ್ಟು ಬಹುಮುಖಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ‘ಖಂಡಾನಿ ಶಫಖಾನಾ’ ಸಿನಿಮಾದ ಟ್ರೈಲರ್‌ ಸಾಕಷ್ಟು ಮೆಚ್ಚುಗೆ ಗಳಿಸಿದೆ.

‘ಬೇಬಿ ಬೇಡಿ’ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ತಮ್ಮ ಪೂರ್ವಜರ ಕ್ಲಿನಿಕ್‌ ನಡೆಸುವ ಈಕೆ ‘ಸೆಕ್ಸ್‌ ಎಜುಕೇಷನ್‌’ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಾಳೆ. ‘ಬಾತ್‌ ತೋ ಕರೋ’ ಎಂಬ ಡೈಲಾಗ್ ಸಿನಿಮಾದಲ್ಲಿ ಪದೇ ಪದೇ ಬರಲಿದೆ. ಅಂದರೆ ಮುಕ್ತವಾಗಿ ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡಿ ಎಂಬ ಸಂದೇಶವನ್ನು ಸಿನಿಮಾ ನೀಡಲಿದೆ.

ಬೋಲ್ಡ್‌ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸೋನಾಕ್ಷಿ ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ‘ದಬಾಂಗ್‌’ ಸಿನಿಮಾ ಅವರಿಗೆ ಬಾಲಿವುಡ್‌ನಲ್ಲಿ ನೆಲೆವೂರಲು ಕಾರಣವಾಯಿತು. ‘ಅಕೀರಾ’ ದಂತಹ ಪಾತ್ರಕ್ಕೆ ಅವರ ಅಭಿಮಾನಿಗಳು ಅವರನ್ನು ‘ಲೇಡಿ ಹೀರೊ’ ಎಂದು ಕರೆದರು.  

ಪ್ರತಿಕ್ರಿಯಿಸಿ (+)