ಮಗನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಂದೇಶ ಪ್ರಕಟಿಸಿದ ಸೋನಾಲಿ ಬೇಂದ್ರೆ

7

ಮಗನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಂದೇಶ ಪ್ರಕಟಿಸಿದ ಸೋನಾಲಿ ಬೇಂದ್ರೆ

Published:
Updated:

ಮುಂಬೈ: ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಅವರು ಮಗ ರಣವೀರ್‌ನ 13ನೇ ಹುಟ್ಟುಹಬ್ಬದ ಅಂಗವಾಗಿ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಬರಹ ಮತ್ತು ವಿಡಿಯೊವನ್ನು ಪ್ರಕಟಿಸಿದ್ದಾರೆ.

ಮೆಟಸ್ಟ್ಯಾಟಿಸ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸೋನಾಲಿ, ಕಳೆದ ಹಲವು ದಿನಗಳಿಂದ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ರಣವೀರ್‌! ನನ್ನ ಸೂರ್ಯ, ಚಂದ್ರ, ನಕ್ಷತ್ರಗಳು, ಆಕಾಶ... ಸರಿ, ಬಹುಶಃ ನಾನು ಸ್ವಲ್ಪ ಭಾವಾತಿರೇಕಗೊಂಡಿದ್ದೇನೆ. ಆದರೆ ಇದು ನಿನ್ನ 13ನೇ ಹುಟ್ಟುಹಬ್ಬ. ವಾಹ್ !, ಇದೀಗ ನೀನು ಹದಿಹರೆಯದವ. ನಿನ್ನ ವಿವೇಕ, ಹಾಸ್ಯ, ಶಕ್ತಿ, ದಯೆ, ತುಂಟಾಟಗಳ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನಿನ್ನಿಂದ ನಾನು ಎಷ್ಟು ಖುಷಿಯಾಗಿದ್ದೇನೆ ಎಂದು ಹೇಳಲು ನನಗೆ ಸಾಧ್ಯವಿಲ್ಲ. ಜನ್ಮದಿನದ ಶುಭಾಶಯಗಳು. ನಾವು ಒಟ್ಟಾಗಿ ಇಲ್ಲದಿರುವ ಮೊದಲ ಸಂದರ್ಭವಿದು. ನಾನು ನಿನ್ನನ್ನು ತುಂಬ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನಾನು ನಿನ್ನನ್ನು ಸದಾಕಾಲ ಅತಿಯಾಗಿ ಪ್ರೀತಿಸುವೆ’ ಎಂದು ಬರೆದಿದ್ದಾರೆ.

ಈಚೆಗೆ, ‘ಕ್ಯಾನ್ಸರ್ ವಿರುದ್ಧ ಹೋರಾಡಲು ಮಗನೇ ನನಗೆ ಧೈರ್ಯ’ ಎಂದು ಸೋನಾಲಿ ಹೇಳಿದ್ದರು.

ಇದನ್ನೂ ಓದಿ...

ಕ್ಯಾನ್ಸರ್ ವಿರುದ್ಧ ಹೋರಾಡಲು ಮಗನೇ ಧೈರ್ಯ: ಸೋನಾಲಿ 

ಕ್ಯಾನ್ಸರ್‌: ಗುಣಮುಖರಾಗುವ ವಿಶ್ವಾಸದಲ್ಲಿ ಬಾಲಿವುಡ್‌ ನಟಿ ಸೋನಾಲಿ ಬೇಂದ್ರ
 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !