ಬುಧವಾರ, ಮಾರ್ಚ್ 29, 2023
31 °C

ಸೋನಮ್‌–ದುಲ್ಕರ್ ಜೋಡಿಯ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಭಾರತದ ನಟ ದುಲ್ಕರ್ ಸಲ್ಮಾನ್‌, ಬಾಲಿವುಡ್‌ನ ನಟಿ ಸೋನಮ್‌ ಕಪೂರ್ ಜೋಡಿ ತೆರೆಯ ಮೇಲೆ ಮೋಡಿ ಮಾಡಲು ಸಜ್ಜುಗೊಂಡಿದೆ.

ಈ ಜೋಡಿಯ ‘ದಿ ಜೋಯಾ ಫ್ಯಾಕ್ಟರ್‌’ ಹಿಂದಿ ಸಿನಿಮಾ ಸೆಪ್ಟೆಂಬರ್‌ 20ರಂದು ತೆರೆಕಾಣಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಟ್ರೆಂಡ್ ಸೃಷ್ಟಿಸಿದೆ..

‘ಪ್ಯಾಡ್‌ ಮ್ಯಾನ್‌’ ಹಾಗೂ ‘ಸಂಜು’ ಸಿನಿಮಾಗಳ ಬಳಿಕ ಸೋನಮ್‌ ಕಪೂರ್‌ ಬಾಲಿವುಡ್‌ನಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಈ ಸಿನಿಮಾ ಅವರ ಸಿನಿ ಜರ್ನಿಯಲ್ಲಿ ಮುಖ್ಯವಾದದ್ದು ಎಂದು ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಬಾಲಿವುಡ್‌ನಲ್ಲಿ ನೆಲೆವೂರಲು ದುಲ್ಕರ್‌ಗೆ ಕೂಡ ಇದು ಹೊಸ ಹೆಜ್ಜೆಯಂತೆ.

ಅನುಜಾ ಚೌಹಾಣ್ ಅವರ ‘ದಿ ಜೋಯಾ ಫ್ಯಾಕ್ಟರ್‌’ ಪುಸ್ತಕ ಆಧಾರಿತ ಸಿನಿಮಾ ಇದಾಗಿದೆ.

‘ನಾನು ನತದೃಷ್ಟೆ’ ಎಂದುಕೊಳ್ಳುವ ಜೋಯಾ ಸೋಲಂಕಿ ಅವರ ಕಥೆಯನ್ನು ಸಿನಿಮಾ ಒಳಗೊಂಡಿದೆ. ಜೋಯಾ ತನಗೆ ಸಿಕ್ಕ ಜೀವನವನ್ನು ಶಪಿಸುತ್ತಿರುತ್ತಾಳೆ. ಭಾರತ ತಂಡ ಮೊದಲ ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಂಡ ವರ್ಷದಲ್ಲೇ ಆಕೆ ಜನಿಸಿರುತ್ತಾಳೆ. ಬಳಿಕ ಕ್ರಿಕೆಟ್ ತಂಡದ ನಾಯಕನೊಂದಿಗೇ ಪ್ರೀತಿಯಲ್ಲಿ ಬೀಳುತ್ತಾಳೆ. ಈ ಕಥಾ ಹಂದರವನ್ನು ಸಿನಿಮಾ ಒಳಗೊಂಡಿದೆ.

ಬಾಲಿವುಡ್‌ನಲ್ಲಿ ಈಗಾಗಲೇ ಒಂದು ಸಿನಿಮಾ ಮಾಡಿರುವ ದುಲ್ಕರ್‌, ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಫಾಕ್ಸ್‌ ಸ್ಟಾರ್ ಸ್ಟುಡಿಯೋಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಅಭಿಷೇಕ್ ಶರ್ಮಾ ಆ್ಯಕ್ಷನ್‌ ಕಟ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು