ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌: 1000 ವಿದ್ಯಾರ್ಥಿನಿಯರಿಗೆ ಸೈಕಲ್‌ ನೀಡಿದ ನಟ ಸೋನು ಸೂದ್‌

Last Updated 5 ಜನವರಿ 2022, 6:27 IST
ಅಕ್ಷರ ಗಾತ್ರ

ಮೊಗಾ(ಪಂಜಾಬ್‌): ನಟ ಸೋನು ಸೂದ್‌ ಅವರು ತಮ್ಮ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿದ್ದಾರೆ.

ಈಗ ತಮ್ಮ ಹುಟ್ಟೂರಾದ ಪಂಜಾಬ್‌ನ ಮೊಗಾ ನಗರದಲ್ಲಿ1000 ವಿದ್ಯಾರ್ಥಿನಿಯರಿಗೆ ಸೈಕಲ್‌ಗಳನ್ನು ಸೋನು ವಿತರಿಸಿದ್ದಾರೆ.

‘ಮೊಗಾ ಕಿ ಬೇಟಿ’ ಎಂಬ ಅಭಿಯಾನವನ್ನು ಆರಂಭಿಸಿರುವ ಅವರು, ಮೊಗಾ ಸುತ್ತಮುತ್ತ ಇರುವ 40 ಹಳ್ಳಿಗಳ ವಿದ್ಯಾರ್ಥಿನಿಯರಿಗೆಸೈಕಲ್‌ ನೀಡಿದ್ದಾರೆ.

ಸೋನು ಸೂದ್ ಸಹೋದರಿ ಮಾಳವಿಕಾ ಅವರುಮುಂಬರುವ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಮೊಗಾದಿಂದ ಸ್ಪರ್ಧಿಸಲಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರು ಸುರಕ್ಷಿತವಾಗಿ ಊರುಗಳಿಗೆ ಮರಳಲು ಬಸ್ಸು, ವಿಮಾನದ ವ್ಯವಸ್ಥೆಯನ್ನು ಸೋನು ಸೂದ್‌ಮಾಡಿದ್ದರು. ತಮ್ಮ ಸ್ವಂತ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡಿದ್ದಲ್ಲದೇ ಆರ್ಥಿಕ ಸಹಾಯವನ್ನೂ ನೀಡಿದ್ದರು.

ಸೋನು ಅವರ ಈ ಕಾರ್ಯಕ್ಕೆ ದೇಶವೇ ತಲೆದೂಗಿತ್ತು. ರಾಜಕಾರಣಿಗಳು, ಸಿನಿಮಾರಂಗದವರು ಸೇರಿದಂತೆ ಪ್ರಧಾನಿ ಮೋದಿ ಕೂಡ ಸೋನು ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT