ಶನಿವಾರ, ಜೂನ್ 19, 2021
23 °C

ಸೋನು ಸೂದ್ ಹೆಸರಿನಲ್ಲಿ ನಕಲಿ ಕೋವಿಡ್ ದೇಣಿಗೆ ಅಭಿಯಾನ: ಎಚ್ಚರಿಸಿದ ನಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೋವಿಡ್‌–19 ಬಿಕ್ಕಟ್ಟಿನ ಮಧ್ಯೆ ಜನರಿಗೆ ನಿರಂತರವಾಗಿ ಸಹಾಯ ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್, ಸಹಾಯ ಮಾಡುವ ನೆಪದಲ್ಲಿ ತಮ್ಮ ಹೆಸರನ್ನು ಬಳಸಿಕೊಂಡು ನಕಲಿ ಫೌಂಡೇಷನ್ ಮೂಲಕ ದೇಣಿಗೆ ಪಡೆಯುತ್ತಿರುವ ಬಗ್ಗೆ ಸೋಮವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

‘ಸೋನು ಸೂದ್ ಫೌಂಡೇಷನ್’ ಎನ್ನುವ ಹೆಸರಿನಲ್ಲಿ ಕೆಲವರು ದೇಣಿಗೆ ಪಡೆಯುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ’ ಎಂದು ತಮ್ಮ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಸೋನು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಿದ್ದಾರೆ.

‘ಈ ಬಗ್ಗೆ ಎಚ್ಚರಿಕೆಯಿಂದಿರಿ ಮತ್ತು ನಿಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ’ ಎಂದಿರುವ ಅವರು ತಮ್ಮ  ಹೆಸರಿನ ಫೌಂಡೇಷನ್‌ನ ಪೋಸ್ಟರ್‌ ಅನ್ನು ಟ್ಯಾಗ್ ಮಾಡಿ ಇದು ನಕಲಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು