ಸೋಮವಾರ, ಆಗಸ್ಟ್ 2, 2021
25 °C

ದೂಳೆಬ್ಬಿಸುತ್ತಿದೆ ‘ಸೂರ್ಯವಂಶಿ‘ ಟ್ರೇಲರ್‌: ಅಕ್ಷಯ್, ಅಜಯ್‌, ರಣವೀರ್‌ ಮೋಡಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈನಲ್ಲಿ 1993, 2002, 2006 ಮತ್ತು 2008ರಲ್ಲಿ ನಡೆದ ಸರಣಿ ಉಗ್ರರ ದಾಳಿಗಳ ಘಟನೆ ಆಧಾರಿತ ಬಾಲಿವುಡ್‌ ಸಿನಿಮಾ ’ಸೂರ್ಯವಂಶಿ‘ ಟ್ರೇಲರ್‌ ಬಿಡುಗಡೆಯಾಗಿ, ಯೂಟ್ಯೂಬ್‌ಗೆ ಅಪ್‌ಲೋಡ್‌ ಆಗಿದೆ.

4 ನಿಮಿಷ 15 ಸೆಕೆಂಡ್ ಇರುವ ಸುಧೀರ್ಘ ಈ ಟ್ರೇಲರ್ನಲ್ಲಿ ಬಾಲಿವುಡ್‌ ನಟರಾದ ಅಕ್ಷಯ್‌ಕುಮಾರ್ ಆಕ್ಷನ್‌, ರಣವೀರ್‌ಸಿಂಗ್ ಕಾಮಿಡಿ, ಆಕ್ಷನ್, ಜತೆಗೆ ಸಿಂಗಂ ಖ್ಯಾತಿಯ ಅಜಯ್‌ ದೇವಗನ್‌ ಅವರ ಸ್ಟೈಲಿಷ್ ನಟನೆಯ ತುಣುಕುಗಳಿವೆ. ಟ್ರೇಲರ್ ಬಿಡುಗಡೆಯಾದ ಎರಡು ದಿನಕ್ಕೆ 4 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಅಕ್ಷಯ್‌ ಜತೆಗೆ ಕತ್ರಿನಾಕೈಫ್ ನಾಯಕಿಯಾಗಿದ್ದಾರೆ. ಅಕ್ಷಯ್, ಅಜಯ್‌, ರಣವೀರ್‌ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಕಾಂಬಿನೇನ್‌ನಲ್ಲಿ ತಯಾರಾಗಿರುವ ಈ ಸಿನಿಮಾ ಮಾ.24ರಂದು ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ.

ಅಕ್ಷಯ್‌, ಅಜಯ್‌ ಇದ್ದಕಡೆ ಸಾಹಸ ನಟನೆಗೆ ಬರವಿಲ್ಲ. ಅದರಂತೆ ಈ ಸಿನಿಮಾದಲ್ಲಿ ಅಕ್ಷಯ್‌ ಹೆಲಿಕಾಪ್ಟರ್‌ ಏರಿ ಸಾಹಸ ಮಾಡಿದ್ದಾರೆ. ಅಜಯ್ ದೇವಗನ್ ವೇಗವಾಗಿ ಜೀಪ್‌ ಓಡಿಸುತ್ತಲೇ ಎಂಟ್ರಿಕೊಡುತ್ತಾರೆ. ರಣವೀರ್‌ ಸಿಂಗ್‌ ಕಾಮಿಡಿ ನಟನೆಯ ಜತೆಗೆ, ಸಾಹಸ ಪ್ರಧಾನ ದೃಶ್ಯಗಳು ಕುತೂಹಲ ಹುಟ್ಟಿಸುತ್ತವೆ.

ಸ್ಲೀಪರ್ ಸೆಲ್ ಹಾಗೂ 1993ಯಲ್ಲಿ ಮುಂಬೈನಿಂದ ತರಲಾಗಿದ್ದ ಒಂದು ಟನ್ ಆರ್ಡಿಎಕ್ಸ್ ಕಥೆಯ ಕೇಂದ್ರಬಿಂದು. ಹುದುಗಿಸಿಟ್ಟ ಆರ್ ಡಿ ಎಕ್ಸ್ ಹುಡುಕಾಟದ ಸುತ್ತ ಸಿನಿಮಾ ಸಾಗಲಿದೆ. ಟ್ರೇಲರ್ ಗಮನಿಸಿದಾಗ, ಸೂರ್ಯವಂಶಿ ಸಿನಿಮಾ, ಸಾಹಸ, ಮಸಾಲೆ, ಕಾಮಿಡಿ, ಭಾವನಾತ್ಮಕ ದೃಶ್ಯಗಳ ಸಂಗಮದಂತೆ ಕಾಣುತ್ತದೆ.

ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ರಣವೀರ್ ಸಿಂಗ್ ಲೇಟ್ ಆಗಿ ಬರುತ್ತಾರೆ. ಅದಕ್ಕೆ ರಣವೀರ್ ಸಿಂಗ್, ’ದೀಪಿಕಾ ಪಡುಕೋಣೆ‘ ಕಾರಣ ಎಂದು ಹೇಳುವ ವಿಡಿಯೊ ಕೂಡ, ಟೈಮ್ಸ್ ನಲ್ಲಿ ಅಪ್ ಮಾಡಿದ್ದಾರೆ. ಅದು ತಮಾಷೆ ವಿಡಿಯೊ..

ತಮಾಷೆ ವಿಡಿಯೊ ವೈರಲ್‌: ‘ಸೂರ್ಯವಂಶಿ‘ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ, ನಟ ರಣವೀರ್‌ ಸಿಂಗ್ ವಿಳಂಬವಾಗಿ ಬರುತ್ತಾರೆ. ಅಕ್ಷಯ್‌ ಕುಮಾರ್, ‘ಯಾಕೆ ಲೇಟ್‌‘ ಅಂತ ಕೇಳಿದಾಗ, ‘ದೀಪಿಕಾಳಿಂದ ತಡ ಆಯ್ತು‘ ಅಂತ ತಮಾಷೆಯಾಗಿ ಹೇಳುತ್ತಾರೆ ರಣವೀರ್‌ ಸಿಂಗ್‌. ಸಿನಿಮಾದಲ್ಲೂ ಕಾಮಿಡಿ ಮಾಡಿರುವ ರಣವೀರ್‌, ಇಲ್ಲೂ ಅದನ್ನು ಮುಂದುವರಿಸಿದ್ದಾರೆ. ಆ ತಮಾಷೆ ಮಾಡುವ ವಿಡಿಯೊ, ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು