ಶನಿವಾರ, ಸೆಪ್ಟೆಂಬರ್ 25, 2021
22 °C

ಸಿನಿಮಾರಂಗಕ್ಕೆ ಗುಡ್‌ಬೈ ಹೇಳಿದ ದಕ್ಷಿಣ ಭಾರತದ ಖ್ಯಾತ ನಟಿ ಕಾರ್ತಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಭಾರತದ ಖ್ಯಾತ ನಟಿ ಕಾರ್ತಿಕಾ ಸಿನಿಮಾರಂಗಕ್ಕೆ ಗುಡ್‌ಬೈ ಹೇಳಿದ್ದು ಹೊಟೇಲ್ ಉದ್ಯಮದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ದರ್ಶನ್‌ ಅಭಿನಯದ ‘ಬೃಂಧಾವನ‘ ಸಿನಿಮಾದಲ್ಲಿ ನಟಿ ಕಾರ್ತಿಕಾ ನಟಿಸಿದ್ದರು. ಇತ್ತೀಚೆಗೆ ಅವಕಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಅವರು ಸಿನಿಮಾ ಬದುಕಿಗೆ ಗುಡ್‌ಬೈ ಹೇಳುವುದಾಗಿ ಘೋಷಣೆ ಮಾಡಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

2016ರಲ್ಲಿ ಕಾರ್ತಿಕಾ ತಮಿಳಿನ ‌‘ವಾ ದಿಲ್‌‘ ಸಿನಿಮಾದಲ್ಲಿ ನಟಿಸಿದ್ದರು. ನಂತರ ಇಲ್ಲಿಯವರೆಗೂ ಅವರು ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಸ್ವಂತ ಹೊಟೇಲ್‌ ಹೊಂದಿರುವ ಕಾರ್ತಿಕಾ ಅವರು ಅದೇ ಉದ್ಯಮದಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ.

ಕಾರ್ತಿಕಾ ಅವರಿಗೆ ತೆಲುಗಿನ ಜೋಷ್‌, ತಮಿಳಿನ ಕೋ ಹಾಗೂ ಮಲಯಾಳಂನ ಮಕರಮಂಜು ಚಿತ್ರಗಳು ಜನಪ್ರಿಯತೆ ತಂದುಕೊಟ್ಟಿದ್ದವು. ಕಾರ್ತಿಕಾ, ತಮಿಳಿನ ಖ್ಯಾತ ಹಿರಿಯ ನಟಿ ರಾಧಿಕ ಅವರ ಪುತ್ರಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು