ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಶುಗರ್‌ಲೆಸ್‌’ ಸಿನಿಮಾ ನಿರ್ದೇಶಕ ಶಶಿಧರ್ ಮಲಯಾಳ ಚಿತ್ರರಂಗಕ್ಕೆ

Published 30 ಮೇ 2024, 23:30 IST
Last Updated 30 ಮೇ 2024, 23:30 IST
ಅಕ್ಷರ ಗಾತ್ರ

ಪೃಥ್ವಿ ಅಂಬಾರ್‌ ನಟನೆಯ ‘ಶುಗರ್‌ಲೆಸ್‌’ ಸಿನಿಮಾ ನಿರ್ದೇಶಿಸಿದ್ದ ಶಶಿಧರ್‌ ಕೆ.ಎಂ. ಇದೀಗ ಮಲಯಾಳ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ.

ಮಲಯಾಳದಲ್ಲಿ ಇತ್ತೀಚೆಗೆ ತೆರೆಕಂಡು ಹಿಟ್‌ ಆಗಿದ್ದ ‘ಮಂಜುಮ್ಮೆಲ್‌’ ಬಾಯ್ಸ್‌ ಚಿತ್ರದ ನಟ ಶ್ರೀನಾಥ್‌ ಭಾಸಿಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಶಶಿಧರ್‌. ‘ಸಿಬಿಲ್‌ ಸ್ಕೋರ್‌’ ಎಂಬ ಸಿನಿಮಾವನ್ನು ಶಶಿಧರ್‌ ನಿರ್ದೇಶಿಸುತ್ತಿದ್ದು, ಇದರಲ್ಲಿ ಶ್ರೀನಾಥ್‌ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ.

ಶ್ರೀನಾಥ್ ‘ವೈರಸ್’, ‘ಹೋಮ್’, ‘ಕುಂಬಳಂಗಿ ನೈಟ್ಸ್’, ‘ಭೀಷ್ಮ ಪರ್ವಂ’ ಹೀಗೆ ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಕರ್ನಾಟಕದ ಹಾಗೂ ಕೇರಳದ ತಂತ್ರಜ್ಞರು ಇರಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಸೋಹನ್ ಸೀನುಲಾಲ್, ದೀಪಕ್ ಪ್ರಿನ್ಸ್ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದಿ ಎಮೋಷನ್ಸ್ ಫ್ಯಾಕ್ಟರಿ ಗ್ರೂಪ್(EFG) ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ವಿವೇಕ್ ಶ್ರೀಕಂಠಯ್ಯ ಬಂಡವಾಳ ಹೂಡಿದ್ದಾರೆ. ಪ್ರದೀಪ್ ನಾಯರ್ ಛಾಯಾಚಿತ್ರಗ್ರಹಣ, ಅರ್ಜುನ್ ಟಿ ಸತ್ಯನ್ ಸಂಭಾಷಣೆ, ಸೋಬಿನ್ ಕೆ. ಸೋಮನ್ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT