ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಗೌರಿಶಂಕರ

Published 12 ನವೆಂಬರ್ 2023, 18:57 IST
Last Updated 12 ನವೆಂಬರ್ 2023, 18:57 IST
ಅಕ್ಷರ ಗಾತ್ರ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಗೌರಿಶಂಕರ’ ಇಂದಿನಿಂದ (ನ.13) ಪ್ರಸಾರವಾಗಲಿದೆ. ನಾಯಕನಾಗಿ ಯಶವಂತ್, ನಾಯಕಿಯಾಗಿ ಕೌಸ್ತುಭಮಣಿ ನಟಿಸುತ್ತಿದ್ದಾರೆ.

‘ಹಾಸನಾಂಬೆಯ ತವರೂರಾದ ಹಾಸನದಲ್ಲಿ ಈ ಕತೆಯು ಕೇಂದ್ರೀಕೃತವಾಗಿರುತ್ತದೆ. ಈ ಧಾರಾವಾಹಿಯ ನಾಯಕಿ ‘ಗೌರಿ’ ಯಾರನ್ನೂ ನೋಯಿಸದ ಮುಗ್ದ ಮನಸ್ಸಿನ ಕಣ್ಮಣಿ. ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದವಳು. ಆದರೆ ಸಮಯ ಬಂದಾಗ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಬಲ್ಲ ಧೈರ್ಯವಂತೆ.  ತಂದೆಯಂತೆ ತಾನು ಪ್ರೊಫೆಸರ್ ಆಗಬೇಕೆಂಬ ಕನಸನ್ನು ಹೊತ್ತಿರುವವಳು. ಕಥಾ ನಾಯಕ ‘ಶಂಕರ’ ಹೆಣ್ಣು ಮಕ್ಕಳು ನಾಲ್ಕುಗೋಡೆ ನಡುವೆ ಬದುಕಬೇಕು ಎಂದು ನಂಬಿರುವ ಮನೆತನದಲ್ಲಿ ಬೆಳೆದವ. ನೋಡಲು ಒರಟನಾದರೂ ಮಗುವಿನಂಥ ಮನಸ್ಸು. ಬೆಂಕಿ ಜೊತೆ ಬಿರುಗಾಳಿಯ ಹೊಸ ಪ್ರೇಮ ಕಥೆ ಈ ಧಾರಾವಾಹಿ’ ಎಂದು ವಾಹಿನಿ ತಿಳಿಸಿದೆ.

ವಿದ್ಯಾಮೂರ್ತಿ, ಮೋಹನ್, ಕೀರ್ತಿ ಭಾನು ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ಇಂದಿನಿಂದ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT