ಮಂಗಳವಾರ, ಜನವರಿ 25, 2022
24 °C

ನಟಿ ನಿಖಿತಾ ದತ್ತಾ ಫೋನ್ ಕದ್ದ ಅಪರಿಚಿತರು ಪರಾರಿ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ಹಾಗೂ ಕಿರುತೆರೆ ನಟಿ ನಿಖಿತಾ ದತ್ತಾ ಅವರ ಮೊಬೈಲ್‌ ಫೋನ್ ಅನ್ನು ಅಪರಿಚಿತರು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.

ಸೋಮವಾರ ರಾತ್ರಿ ಬಾಂದ್ರಾದಲ್ಲಿ ಈ ಘಟನೆ ನಡೆದಿದೆ. ‘ರಾತ್ರಿ 7.30ರ ಸುಮಾರಿಗೆ ಬಾಂದ್ರಾ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಅಪರಿಚಿತರು ನನ್ನ ತಲೆಗೆ ಹೊಡೆದರು. ಬಳಿಕ ಎರಡು–ಮೂರು ಸೆಕೆಂಡ್‌ಗಳಲ್ಲಿ ಕೈಯಲ್ಲಿ ಇದ್ದ ಮೊಬೈಲ್‌ ಫೋನ್‌ ಅನ್ನು ಕಿತ್ತುಕೊಂಡು ಪರಾರಿಯಾದರು’ ಎಂದು ದೂರಿದ್ದಾರೆ.

ಈ ಸಮಯದಲ್ಲಿ ಸ್ಥಳೀಯರು ಸೇರಿದಂತೆ ಸ್ವೀಟ್‌ ಅಂಗಡಿ ಮಾಲೀಕರು ಸಹಾಯಕ್ಕೆ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರು ವೇಗವಾಗಿ ಬೈಕ್‌ನಲ್ಲಿ ಪರಾರಿಯಾದರು ಎಂದು ನಿಖಿತಾ ಹೇಳಿದ್ದಾರೆ.

ಮೊಬೈಲ್‌ ಕದ್ದ ಸಂಬಂಧ ನಿಖಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪ್ರಕರಣದ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ನಿಖಿತಾ ಅವರು ಫೋನ್‌ ಕಳುವಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಸೇರಿದಂತೆ ಆಪ್ತರು ಹಾಗೂ ಗೆಳೆಯರು ಅವರಿಗೆ ಸಮಾಧಾನ ಹೇಳಿದ್ದಾರೆ.

ನಿಖಿತಾ ಅವರು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಕಬೀರ್‌ ಸಿಂಗ್ ಸಿನಿಮಾ ಹಾಗೂ ಬಿಗ್‌ಬುಲ್‌ ಸಿರೀಸ್‌ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು