ಶುಕ್ರವಾರ, ಜೂನ್ 18, 2021
27 °C
ಕೋವಿಡ್‌ ನಂತರದ ಪರಿಣಾಮಗಳಿಂದ ಬಳಲುತ್ತಿದ್ದ ಛೋಪ್ರಾಗೆ ಶನಿವಾರ ಹೃದಯಾಘಾತ

ಬಾಲಿವುಡ್‌ನ ಸಂಭಾಷಣೆಕಾರ ಸುಬೋಧ್‌ ಛೋಪ್ರಾ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್‌ನ ಸಂಭಾಷಣೆ ಬರಹಗಾರ, ನಿರ್ದೇಶಕ ಸುಬೋಧ್‌ ಛೋಪ್ರಾ(49) ಅವರು ಶುಕ್ರವಾರ ನಿಧನರಾದರು.

ಕಳೆದ ವಾರ ಕೋವಿಡ್‌ಗೆ ತುತ್ತಾಗಿದ್ದ ಅವರು ಚೇತರಿಸಿಕೊಂಡಿದ್ದರು. ಆದರೆ, ಕೋವಿಡ್‌ ನಂತರದ ಪರಿಣಾಮಗಳಿಂದ ಬಳಲಿದ್ದ ಅವರು ಹೃದಯಾಘಾತಕ್ಕೊಳಗಾಗಿ ನಿಧನರಾದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. 

ಇಮ್ರಾನ್‌ ಹಶ್ಮಿ ಅಭಿನಯದ ‘ಮರ್ಡರ್‌’, ಇರ್ಫಾನ್‌ ಖಾನ್‌ ಅವರ ಅಭಿನಯದ ಚಿತ್ರ ‘ರೋಗ್‌’ ಸಹಿತ ಹಲವಾರು ಚಿತ್ರಗಳಿಗೆ ಅವರು ಸಂಭಾಷಣೆ ಬರೆದಿದ್ದರು. 

‘ಕಳೆದ ಶನಿವಾರ ಅವರು ಕೋವಿಡ್‌ ಮುಕ್ತರಾಗಿದ್ದರು. ಪರೀಕ್ಷಾ ವರದಿ ನೆಗೆಟಿವ್‌ ಬಂದಿತ್ತು. ಆದರೆ ಸೋಮವಾರ (ಮೇ 10ರಂದು) ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿತು. ರಕ್ತದೊತ್ತಡವೂ ಹೆಚ್ಚಿತು. ಆಮ್ಲಜನಕದ ಮಟ್ಟ ದಿಢೀರ್‌ ಕುಸಿಯಿತು. ತಕ್ಷಣವೇ ಅವರನ್ನು ಮಲಾಡ್‌ನ ಲೈಫ್‌ಲೈನ್‌ ಆಸ್ಪತ್ರೆಗೆ ದಾಖಲಿಸಿದೆ. ಆದರೆ ಅವರು ಹೃದಯಾಘಾತದಿಂದ ನಿಧನರಾದರು’ ಎಂದು ಛೋಪ್ರಾ ಅವರ ಸಹೋದರ ಶಾಂಕಿ ವಿವರಿಸಿದರು. 

ಸುಬೋಧ್ ಅವರು ‘ವಸುಧಾ’ ಎಂಬ ಮಲಯಾಳಂ ಚಿತ್ರವನ್ನೂ ನಿರ್ದೇಶಿಸಿದ್ದರು. 

ಈ ವರ್ಷ ಬಾಲಿವುಡ್‌ ಹಲವಾರು ಪ್ರತಿಭೆಗಳನ್ನು ಕೋವಿಡ್‌ ಕಾರಣದಿಂದ ಕಳೆದುಕೊಂಡಿದೆ. ಶ್ರವಣ್, ವನರಾಜ್ ಭಾಟಿಯಾ, ಅಭಿಲಾಶಾ ಪಾಟೀಲ್, ಶ್ರೀಪಾದ, ಅಜಯ್ ಶರ್ಮಾ, ಲಲಿತ್ ಬೆಹ್ಲ್, ಅಮಿತ್ ಮಿಸ್ತ್ರಿ ಈ ಸಾಲಿನಲ್ಲಿ ಪ್ರಮುಖರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು