ಸೋಮವಾರ, ಅಕ್ಟೋಬರ್ 26, 2020
24 °C

ಫ್ಯಾಂಟಮ್‌ನ ವಿಡಿಯೊ ಹಂಚಿಕೊಂಡ ಕಿಚ್ಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಚ್ಚ ಸುದೀಪ್‌ ಮತ್ತು ನಿರ್ದೇಶಕ ಅನೂಪ್‌ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ ಚಿತ್ರ ‘ಫ್ಯಾಂಟಮ್‌’ ಹೈದರಾಬಾದ್‌ನಲ್ಲಿ ಭರದಿಂದ ಸಾಗಿದೆ. ಚಿತ್ರೀಕರಣದ ಅ‍ಪರೂಪದ ವಿಡಿಯೊ ತುಣುಕೊಂದನ್ನು ಸುದೀಪ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ‘ಫ್ಯಾಂಟಮ್‌’ ಚಿತ್ರದ ಬಗ್ಗೆ ಸಿನಿರಸಿಕರ ಕುತೂಹಲ ದ್ವಿಗುಣಗೊಳಿಸುವಂತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಡಿಯೊಗೆ ಸಿನಿಮಾ ಮಂದಿಯಿಂದಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಮೊದಲ ದಿನದ ಚಿತ್ರೀಕರಣದ ದೃಶ್ಯವೊಂದನ್ನು ಹಂಚಿಕೊಂಡಿರುವ ಅವರು, ಇದು ಟೀಸರ್‌ ಅಲ್ಲ, ಮತ್ತೆ ಶೂಟಿಂಗ್‌ ಶುರುವಾಗಿರುವ ಸಂಭ್ರಮದ ಸಲುವಾಗಿ ಈ ವಿಡಿಯೊ ಅನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುವುದಾಗಿ ಕಿಚ್ಚ ಹೇಳಿದ್ದಾರೆ. ವಿಕ್ರಾಂತ್ ರೋನಾ ಎಂಬ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಕಿಚ್ಚ ಹೇಳಿಕೊಂಡಿದ್ದು, #PhantomBegins ಎಂಬ ಹ್ಯಾಶ್ ಟ್ಯಾಗ್ ನಮೂದಿಸಿದ್ದಾರೆ.

 

‘ಕೊರೊನಾವೆಂಬ ಭೀತಿಯಿಂದ ಬೆಳಕು ಕಾಣದೆ ಕಗ್ಗತ್ತಲ ಕಾಡಿನೊಳಗೆ ಬೆಚ್ಚಿಕೊಂಡು ಬಚ್ಚಿಕುಳಿತ ಚಿತ್ರರಂಗಕ್ಕೆ
ದೀಪವಿಡಿದು ದಾರಿಮಾಡಿ ಧೈರ್ಯ ತುಂಬಿದಂತಿರುವ ಮೆಚ್ಚುಗೆಯ ಅರ್ಥಪೂರ್ಣ ದೃಶ್ಯ....’ ಎಂದು ನಟ ರವಿಶಂಕರ್‌ಗೌಡ ಪ್ರಶಂಸಿಸಿ ರಿಟ್ವೀಟ್‌ ಮಾಡಿದ್ದಾರೆ. ನಿರ್ದೇಶಕ ಸಿಂಪಲ್‌ ಸುನಿ ಸಹ ‘ಗುಮ್ಮ ಬಂದ ಗುಮ್ಮ ಬಂದ’ ಒಕ್ಕಣೆಯೊಂದಿಗೆ ಈ ವಿಡಿಯೊ ಅನ್ನು ರಿಟ್ವೀಟ್‌ ಮಾಡಿದ್ದಾರೆ.

 

ಕೊರೊನಾಗೂ ಮುಂಚೆಯೇ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿತ್ತು. ಆದರೆ, ಕೊರೊನಾ ಲಾಕ್‌ಡೌನ್ ನಂತರ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು. ಶೂಟಿಂಗ್‌ ನಡೆಸಲು ಸರ್ಕಾರ ಅನುಮತಿ ನೀಡಿದ ನಂತರ ಫ್ಯಾಂಟಮ್ ಚಿತ್ರತಂಡ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದ್ದು, ಅನ್ನಪೂರ್ಣ ಸ್ಟುಡಿಯೊದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಛಾಯಾಗ್ರಹಣ ವಿಲಿಯಂ ಡೇವಿಡ್‌, ಸಂಗೀತ ಅಜನೀಶ್‌ ಬಿ. ಅವರದು. ಈ ಚಿತ್ರಕ್ಕೆ ಜಾಕ್‌ ಮಂಜು ಬಂಡವಾಳ ಹೂಡಿದ್ದಾರೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು