ಮಂಗಳವಾರ, ನವೆಂಬರ್ 19, 2019
29 °C

‘ಕಾಲ್‌ ಸೆಂಟರ್‌’ನಲ್ಲಿ ಸುನಿಲ್‌ ಶೆಟ್ಟಿ

Published:
Updated:
Prajavani

ನೈಜ ಘಟನೆ ಆಧಾರಿತ ಹಾಲಿವುಡ್‌ ಸಿನಿಮಾ ‘ಕಾಲ್‌ ಸೆಂಟರ್‌’ನಲ್ಲಿ ನಟ ಸುನಿಲ್‌ ಶೆಟ್ಟಿ ಅಭಿನಯಿಸಲಿದ್ದಾರೆ.

ಅಮೆರಿಕದ ಜಾಫ್ರಿ ಚಿನ್‌ ನಿರ್ದೇಶನದ ಈ ಸಿನಿಮಾದ ಕೆಲವು ಭಾಗದ ಚಿತ್ತೀಕರಣ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದಿತ್ತು.

ಕಾಲ್‌ಸೆಂಟರ್‌ ಹಗರಣದಲ್ಲಿ ಸಿಲುಕಿದ್ದ ಭಾರತದ ಪೊಲೀಸ್ ಅಧಿಕಾರಿಯೊಬ್ಬರ ನೈಜ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದೆ.  ಭಾರತ ಹಾಗೂ ಅಮೆರಿಕದ ನಟರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಕಾಲ್‌ ಸೆಂಟರ್‌ ಪ್ರಕರಣದ ತನಿಖೆ ವೇಳೆ ಅಮೆರಿಕದ ಏಜೆನ್ಸಿಗಳನ್ನು ಕೂಡ ಬಳಸಿಕೊಳ್ಳಲಾಗಿತ್ತು. ಹಿಂದಿ ಹಾಗೂ ತೆಲುಗು ಭಾಷೆಗೂ ಈ ಸಿನಿಮಾವನ್ನು ರಿಮೇಕ್ ಮಾಡುವ ಯೋಜನೆ ಇದೆ ಎಂದು ತಂಡ ಹೇಳಿದೆ.

ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಲಿರುವ ಸುನಿಲ್ ಶೆಟ್ಟಿ, ಹೈದರಾಬಾದ್‌ನಲ್ಲಿ ಆರೋಪಿಯನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯವೊಂದರ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. 

ಪ್ರತಿಕ್ರಿಯಿಸಿ (+)