ಭಾನುವಾರ, ನವೆಂಬರ್ 29, 2020
25 °C

ಸನ್ನಿ ಲಿಯೋನಿ ‘ಬುಲೆಟ್ಸ್’ ಇಂದಿನಿಂದ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೀಲಿಚಿತ್ರ ತಾರೆ, ಮಾದಕ ನಟಿ ಎಂದೇ ಕರೆಸಿಕೊಳ್ಳುವ ಸನ್ನಿ ಲಿಯೋನಿ ವೆಬ್‌ ಸರಣಿಗಳತ್ತ ಮುಖ ಮಾಡಿದ್ದಾರೆ. ಸನ್ನಿ ನಟನೆಯ ವೆಬ್‌ ಸರಣಿ ‘ಬುಲೆಟ್ಸ್’ ಇಂದಿನಿಂದ ಪ್ರಸಾರ ಆರಂಭಿಸಲಿದೆ. ದೇವಾಂಗ್‌ ಧೋಲ್ಕಿಯಾ ನಿರ್ದೇಶನದ ಈ ಸರಣಿ ಎಂಎಕ್ಸ್ ಪ್ಲೇಯರ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಅಕ್ರಮ ಶಸ್ತ್ರಾಸ್ತ್ರ ಸಾಗಾಟದ ವಿರುದ್ಧ ಹೋರಾಡುವ ಹೆಣ್ಣುಮಕ್ಕಳ ಕಥೆ ಹೊಂದಿರುವ ಈ ವೆಬ್‌ಸರಣಿಯಲ್ಲಿ ಸನ್ನಿ ಲಿಯೋನಿ ಜೊತೆ ಕರೀಶ್ಮಾ ತನ್ನಾ ತೆರೆ ಹಂಚಿಕೊಂಡಿದ್ದಾರೆ. ವಿವೇಕ್ ವಾಸ್ವಾನಿ, ಅಮಾನ್ ಖಾನ್‌, ದೀಪಕ್ ತಿಜೋರಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಟೀನಾ ಹಾಗೂ ಲೋಲೊ ಎಂಬ ಇಬ್ಬರು ಧೈರ್ಯಶಾಲಿ ಹೆಣ್ಣುಮಕ್ಕಳ ಸುತ್ತ ಸುತ್ತುವ ಈ ಸರಣಿಯು ಸಸ್ಪೆನ್ಸ್ ಥ್ರಿಲ್ಲರ್‌ ಕಥೆಯನ್ನು ಹೊಂದಿದೆ.

ಎರಡು ದೇಶಗಳ ನಡುವೆ ನಡೆಯುವ ಅಕ್ರಮ ಶಸ್ತ್ರಾಸ್ತ್ರಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಹೆಣ್ಣುಮಕ್ಕಳು ಟೀನಾ, ಲೋಲೊ. ರಾಜಕಾರಣಿಗಳು ಹಾಗೂ ಸ್ಥಳೀಯ ಪೊಲೀಸರ ಸಮಕ್ಷಮದಲ್ಲೇ ನಡೆಯುವ ಈ ಅಕ್ರಮವನ್ನು ತಡೆಯಲು ಮುಂದಾಗುವ ಹೆಣ್ಣುಮಕ್ಕಳಿಗೆ ಅನೇಕ ಅಡ್ಡಿ, ಆತಂಕಗಳು ಎದುರಾಗುತ್ತವೆ. ಆದರೆ ಅವರು ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ಸು ಗಳಿಸುತ್ತಾರಾ? ಇಲ್ಲ ಅರ್ಧಕ್ಕೆ ನಿಲ್ಲಿಸುತ್ತಾರಾ? ಎಂಬುದು ತಿಳಿಯಬೇಕಾದರೆ ವೆಬ್‌ ಸರಣಿಯನ್ನು ನೋಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು