ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

43ನೇ ವಸಂತಕ್ಕೆ ಕಾಲಿಟ್ಟ ಸನ್ನಿ ಲಿಯೋನ್: ಕುಟುಂಬದ ವಿಶೇಷ ಫೋಟೊ ಹಂಚಿಕೊಂಡ ನಟಿ

ಸನ್ನಿ ಲಿಯೋನ್ ಸೋಮವಾರ ಅಪಾರ ಅಭಿಮಾನಿಗಳ ಶುಭಾಶಯದೊಂದಿಗೆ ಜನ್ಮದಿನ ಆಚರಿಸಿಕೊಂಡರು.
Published 14 ಮೇ 2024, 6:16 IST
Last Updated 14 ಮೇ 2024, 6:16 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಸನ್ನಿ ಲಿಯೋನ್ ಅವರು 43ನೇ ವಸಂತಕ್ಕೆ ಕಾಲಿಟ್ಟಿದ್ದು ಅವರು ಮೇ 13ರಂದು ಸೋಮವಾರ ಅಪಾರ ಅಭಿಮಾನಿಗಳ ಶುಭಾಶಯದೊಂದಿಗೆ ಜನ್ಮದಿನ ಆಚರಿಸಿಕೊಂಡರು.

ಈ ವೇಳೆ ಅವರು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಕುಟುಂಬದ ವಿಶೇಷ ಫೋಟೊ ಹಂಚಿಕೊಂಡು ಶುಭಕೋರಿದ ಲಕ್ಷಾಂತರ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಸಾರಿ ಅವರು ಮೂವರು ಮಕ್ಕಳು ಹಾಗೂ ಪತಿ ಡೇನಿಯಲ್ ವೇಬರ್ ಜೊತೆ ಮನೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಐದೂ ಜನ ಒಟ್ಟಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದು ಅಭಿಮಾನಿಗಳು ಸಾಕಷ್ಟು ಮೆಚ್ಚಿಕೊಂಡಿದ್ದಾರೆ.

2023 ರಲ್ಲಿ Kennedy ಎಂಬ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಿದ್ದ ಸನ್ನಿ, ಈ ವರ್ಷ ಇನ್ನೂ ಯಾವುದೇ ಚಿತ್ರ ಘೋಷಣೆ ಮಾಡಿಲ್ಲ. ರಿಯಾಲಿಟಿ ಶೋ, ಜಾಹೀರಾತು ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನೀಲಿಚಿತ್ರಗಳ ಈ ಮಾಜಿ ತಾರೆ ಈ ವರ್ಷ ಬಾಲಿವುಡ್‌ನಲ್ಲಿ ಮತ್ತೊಂದು ಚಿತ್ರವನ್ನು ಸದ್ಯದಲ್ಲೇ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ನೀಲಿ ಚಿತ್ರಗಳಿಗೆ ವಿದಾಯ ಹೇಳಿ ಬಾಲಿವುಡ್‌ನಲ್ಲಿ ಗುರುತಿಸಿಕೊಳ್ಳುತ್ತಿರುವ ಸನ್ನಿ, ಜಿಸ್ಮ್ 2, ರಾಗಿಣಿ ಎಂಎಂಎಸ್2 ಸೇರಿದಂತೆ ಕೆಲವು ಬಾಲಿವುಡ್‌ ಸಿನಿಮಾಗಳಲ್ಲಿ ಮಿಂಚಿದ್ದಾರೆ.

ಸನ್ನಿ ದಂಪತಿಗೆ ಮೂವರು ಮಕ್ಕಳಿದ್ದಾರೆ. ಒಬ್ಬಳು ದತ್ತು ಪುತ್ರಿ (ನಿಶಾ ಕೌರ್) ಇದ್ದು, ಬಾಡಿಗೆ ತಾಯ್ತನ ಮೂಲಕ ಅವಳಿ ಗಂಡು ಮಕ್ಕಳನ್ನು (ಆಶರ್ ಸಿಂಗ್. ನೋವಾ ಸಿಂಗ್) ಪಡೆದಿದ್ದಾರೆ.

ಸನ್ನಿ ಲಿಯೋನ್ ಕುಟುಂಬ

ಸನ್ನಿ ಲಿಯೋನ್ ಕುಟುಂಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT