ಸೋಮವಾರ, ಜನವರಿ 17, 2022
20 °C

ನಟಿ ಸನ್ನಿ ಲಿಯೋನ್‌ ಕೈಯಲ್ಲಿ 7 ಸಿನಿಮಾಗಳು: ಇಲ್ಲಿದೆ ವಿವರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ಮಾದಕ ನಟಿ ಸನ್ನಿ ಲಿಯೋನ್‌ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 7 ಸಿನಿಮಾಗಳು ಇದೇ ವರ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ 7 ಸಿನಿಮಾಗಳು ನಿರ್ಮಾಣವಾಗಲಿವೆ. ತಮಿಳುನಲ್ಲಿ ಪಟ್ಟಾ, ಅನಾಮಿಕ, ತೆಲುಗಿನಲ್ಲಿ ’ವೀರಮ್ಮದೇವಿ’, ಮಲಯಾಳಂನಲ್ಲಿ ’ರಂಗೀಲಾ’ ಸಿನಿಮಾಗಳ ನಿರ್ಮಾಣವಾಗುತ್ತಿವೆ.

ಹಿಂದಿಯಲ್ಲಿ ಕೋಕ ಕೋಲಾ, ಹೆಲೆನ್‌, ಓ ಮೈ ಗೋಸ್ಟ್ ಸಿನಿಮಾಗಳು ತೆರೆಗೆ ಬರಲಿದ್ದು ಈ ಚಿತ್ರಗಳಲ್ಲಿ 2022ರಲ್ಲಿಯೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. 

ಓದಿ: ಮಧುಬನ್ ಹಾಡಿನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ಸನ್ನಿ ಲಿಯೋನ್‌ ವಿರುದ್ಧ ಆಕ್ರೋಶ

2022ನೇ ವರ್ಷವನ್ನು ಗೋವಾದಲ್ಲಿ ಆಚರಿಸಿಕೊಳ್ಳುವ ಮೂಲಕ ಸನ್ನಿ ಲಿಯೋನ್‌ ಸುದ್ದಿಯಾಗಿದ್ದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಗೋವಾದಲ್ಲಿ ಸಂಭ್ರಮಿಸಿದ ಫೋಟೊಗಳನ್ನು ಹಂಚಿಕೊಂಡಿದ್ದರು. 

ಓದಿ: ಗೋವಾದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ ನಟಿ ಸನ್ನಿ ಲಿಯೋನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು