ಹೃತಿಕ್ ರೋಷನ್ ಅಭಿನಯದ ಬಹುನಿರೀಕ್ಷಿತ ‘ಸೂಪರ್ 30’ ಸಿನಿಮಾದ ಟ್ರೇಲರ್ ಈಚೆಗೆ ಬಿಡುಗಡೆಯಾಗಿದ್ದು, ಮೊದಲ ನೋಟದಲ್ಲೇ ನೋಡುಗರ ಗಮನ ಸೆಳೆಯುತ್ತಿದೆ.

ಬಿಹಾರದ ಗಣಿತಜ್ಞ ಆನಂದಕುಮಾರ್ ಅವರ ಜೀವನವನ್ನಾಧರಿಸಿ ತಯಾರಾಗಿರುವ ‘ಸೂಪರ್ 30’ ಚಿತ್ರವನ್ನು ನಿರ್ದೇಶಕ ವಿಕಾಸ್ ಬಹ್ಲ್ ನಿರ್ದೇಶಿಸಿದ್ದಾರೆ. ‘ಮೀಟೂ ಅಭಿಯಾನ’ದಲ್ಲಿ ವಿಕಾಸ್ ಕೂಡಾ ಆರೋಪಿಯಾಗಿದ್ದು, ಈಚೆಗಷ್ಟೇ ಅವರಿಗೆ ಕ್ಲೀನ್ ಚಿಟ್ ದೊರೆತಿತ್ತು.

ಎಂಜಿನಿಯರಿಂಗ್ ಓದಬಯಸುವ, ಬಡಕುಟುಂಬದ 30 ವಿದ್ಯಾರ್ಥಿಗಳಿಗೆ ಕೋಚಿಂಗ್ ಮೂಲಕ ಐಐಟಿ ಮಟ್ಟದ ಸಾಧಕರನ್ನಾಗಿ ರೂಪಿಸುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಕೋಚ್ ಆನಂದಕುಮಾರ್ ಅವರನ್ನೇ ಹೋಲುವಂತೆ ಹೃತಿಕ್ ತಮ್ಮ ಮೇಕಪ್ ಮತ್ತು ಹೇರ್ಸ್ಟೈಲ್ ರೂಪಿಸಿಕೊಂಡಿದ್ದಾರೆ. ಹಿರೋಯಿಸಂ ಬಿಟ್ಟು ಪಕ್ಕಾ ಶಿಕ್ಷಕನಂತೆಯೇ ಹೃತಿಕ್ ಕಾಣಿಸಿಕೊಂಡಿದ್ದಾರೆ. ಆನಂದ್ ಅವರಂತೆ ಪಕ್ಕಾ ಬಿಹಾರಿ ಭಾಷೆ ಮಾತನಾಡಲು ಹೃತಿಕ್ ಕೆಲಕಾಲ ಪಟ್ನಾದಲ್ಲಿ ಭಾಷಾ ತರಬೇತಿಯನ್ನೂ ಪಡೆದುಕೊಂಡಿದ್ದಾರೆ.

ಸಿನಿಮಾದ ಟ್ರೇಲರ್ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಹೃತಿಕ್, ‘ಎದ್ದೇಳು, ಓದು, ಹೋರಾಡು, ಬೆಳೆ ಮತ್ತು ಹಕ್ಕುದಾರರಾಗಿ’ ಅನ್ನುವಂಥ ಸ್ಫೂರ್ತಿದಾಯಕ ನುಡಿಗಳನ್ನು ಬರೆದುಕೊಂಡಿದ್ದಾರೆ. ಟ್ರೇಲರ್ನಲ್ಲಿ ಬರುವ ‘ಇವತ್ತು ರಾಜನ ಮಗ ರಾಜನಾಗೋದಿಲ್ಲ. ಯಾರಿಗೆ ಹಕ್ಕಿದೆಯೋ ಅವನೇ ರಾಜನಾಗುತ್ತಾನೆ’ ಅನ್ನುವಂಥ ಮಾತುಗಳು ಚಿತ್ರದ ಬಗ್ಗೆ ಭರವಸೆ ಹುಟ್ಟಿಸುತ್ತದೆ. ಸೂಪರ್ 30 ಜುಲೈ 12ರಂದು ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.