ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್ ಸಲಾಂ: ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಜನಿಕಾಂತ್

ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ನಿರ್ದೇಶನದ ಹೊಸ ಚಿತ್ರ ಲಾಲ್ ಸಲಾಂ
Last Updated 6 ನವೆಂಬರ್ 2022, 7:50 IST
ಅಕ್ಷರ ಗಾತ್ರ

ಬೆಂಗಳೂರು: ಸೂಪರ್‌ಸ್ಟಾರ್ ಖ್ಯಾತಿಯ ನಟ ರಜನಿಕಾಂತ್ ಅವರು ತಮ್ಮ ಪುತ್ರಿ ಐಶ್ವರ್ಯಾ ನಿರ್ದೇಶನದ ಚಿತ್ರ ‘ಲಾಲ್ ಸಲಾಂ‘ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಲೈಕಾ ಪ್ರೊಡಕ್ಸನ್ಸ್ ಲಾಲ್ ಸಲಾಂ ಚಿತ್ರವನ್ನು ನಿರ್ಮಿಸುತ್ತಿದೆ. ನಟರಾದ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಎ. ಆರ್ ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕಿರಲಿದೆ.

ಲಾಲ್ ಸಲಾಂ, ಐಶ್ವರ್ಯಾ ಅವರ ನಿರ್ದೇಶನದ ಮೂರನೇ ಚಿತ್ರವಾಗಿದೆ. ಈ ಮೊದಲು ಅವರು ‘3‘ ಮತ್ತು ‘ವೈ ರಾರಾ ವೈ‘ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಈಗಾಗಲೇ ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಜನರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT