ಭಾನುವಾರ, ಆಗಸ್ಟ್ 9, 2020
21 °C

ಕೊಡಗಿನಲ್ಲಿ ಸಾವಯವ ಕೃಷಿ ಮಾಡುವ ಕನಸು ಹೊಂದಿದ್ದ ಸುಶಾಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಶಾಂತ್ ಸಿಂಗ್ ಆತ್ಮಹತ್ಯೆಯ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ರಿಯಾ ಚಕ್ರವರ್ತಿ ಹಾಗೂ ಇತರ ಐದು ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಸುಶಾಂತ್ ಬಾಲಿವುಡ್‌ ತ್ಯಜಿಸಿ ತಮ್ಮ ಆತ್ಮೀಯ ಗೆಳೆಯ ಮಹೇಶ್ ಶೆಟ್ಟಿ ಜೊತೆ ಸಾವಯವ ಕೃಷಿ ಮಾಡುವ ಯೋಚನೆಯಲ್ಲಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಇದಕ್ಕೆ ರಿಯಾ ಅನುಮತಿ ನೀಡಿರಲಿಲ್ಲ ಅಲ್ಲದೇ ಬಾಲಿವುಡ್‌ನಲ್ಲೇ ಉಳಿಯಲು ಒತ್ತಾಯಿಸಿದ್ದಾರೆ ಎಂದು ದೂರಿದ್ದಾರೆ.

ಎಫ್‌ಐಆರ್ ಪ್ರಕಾರ ರಿಯಾ ಸುಶಾಂತ್ ಸಿಂಗ್ ಅವರ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳಲ್ಲಿ ತೋರಿಸುವುದಾಗಿ ಹೇಳಿದ್ದಲ್ಲದ್ದೆ, ಅವರನ್ನು ಹುಚ್ಚ ಎಂದು ಸಾಬೀತು ಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎ‌ನ್ನಲಾಗುತ್ತಿದೆ.

ಕೃಷ್ಣ ಕಿಶೋರ್ ಸಿಂಗ್ ‘ನನ್ನ ಮಗ ಸಿನಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ತ್ಯಜಿಸಿ ಕರ್ನಾಟಕದ ಕೂರ್ಗ್‌ನಲ್ಲಿ ನೆಲೆಸುವ ಯೋಜನೆ ಹಾಕಿಕೊಂಡಿದ್ದ. ಅಲ್ಲದೇ ಸ್ನೇಹಿತ ಮಹೇಶ್ ಶೆಟ್ಟಿ ಜೊತೆ ಸೇರಿ ಸಾವಯವ ಕೃಷಿ ಮಾಡುವ ಯೋಚನೆಯೂ ಅವನಿಗಿತ್ತು. ಆದರೆ ರಿಯಾ ನನ್ನ ಮಗನಿಗೆ ಅವನ ಹಳೆಯ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳಿಗೆ ಕೊಡುತ್ತೇನೆ, ನೀನು ಮಾನಸಿಕ ಅಸ್ವಸ್ಥ ಎಂದು ಸಾಬೀತುಪಡಿಸುತ್ತೇನೆ. ನಿನ್ನ ವೃತ್ತಿಜೀವನವನ್ನು ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು’ ಎಂದು ಎಫ್‌ಐಆರ್‌ ಕಾಫಿಯನ್ನು ಆರಂಭಿಸಿದ್ದಾರೆ.

ಕಳೆದ 13 ವರ್ಷಗಳ ಹಿಂದೆ ತಮ್ಮ ಕಿರುತೆರೆ ಪಯಣದ ಆರಂಭದ ದಿನಗಳಿಂದಲೂ ಮಹೇಶ್ ಶೆಟ್ಟಿ ಹಾಗೂ ಸುಶಾಂತ್ ಆತ್ಮೀಯ ಸ್ನೇಹಿತರು. ಇಬ್ಬರೂ ಸಾವಯವ ಕೃಷಿಯ ಒಲವು ಹೊಂದಿದ್ದು ಕೊಡಗಿನಲ್ಲಿ ಸೂಕ್ತ ಜಾಗಕ್ಕಾಗಿ ಜನರನ್ನು ಸಂಪರ್ಕಿಸಿದ್ದರು ಎನ್ನಲಾಗುತ್ತಿದೆ. ಕೇರಳ ಬಾರ್ಡರ್‌ನ ವಿರಾಜಪೇಟೆ–ಕುಟ್ಟಾ ಜಾಗ ನಡುವೆ ಕೃಷಿ ಭೂಮಿ ಖರೀದಿಸುವ ಯೋಜನೆ ಅವರಿಗಿತ್ತು ಎನ್ನಲಾಗುತ್ತಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು