ಭಾನುವಾರ, ಜುಲೈ 25, 2021
27 °C

ತನ್ನ ಪೋಷಕರು ಒಪ್ಪದೆ ಯಾರನ್ನೂ ಮದುವೆಯಾಗಲ್ಲ ಎಂದ ನಟಿ ತಾಪ್ಸಿ ಪನ್ನು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮಾಜಿ ಬ್ಯಾಡ್ಮಿಂಟನ್ ಆಟಗಾರ ಮತ್ತು ಕೋಚ್ ಮಥಿಯಾಸ್ ಬೋ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, ಇತ್ತೀಚಿನ ಸಂದರ್ಶನವೊಂದರಲ್ಲಿ ಅವರ ವಿವಾಹದ ಕುರಿತು ಮಾತನಾಡಿದ್ದಾರೆ.

ಸುದ್ದಿ ಪೋರ್ಟಲ್‌‌ನೊಂದಿಗೆ ಮಾತನಾಡಿರುವ ನಟಿ, 'ನಾನು ಮದುವೆಯಾಗಬೇಕೆಂದು ಪೋಷಕರು ಬಯಸುತ್ತಾರೆ. ನಾನು ಮದುವೆಯಾಗದೇ ಉಳಿಯಬಹುದು ಎಂಬ ಆತಂಕದಲ್ಲಿ ಅವರಿದ್ದಾರೆ. ಆದರೆ ಪೋಷಕರು ಒಪ್ಪದ ಯಾರನ್ನೇ ಆದರೂ ನಾನು ಮದುವೆಯಾಗುವುದಿಲ್ಲ' ಎಂದು ಸ್ಪಷ್ಟ ಮಾತುಗಳಲ್ಲಿ  ಹೇಳಿದ್ದಾರೆ.

ತಾನು ಡೇಟ್ ಮಾಡಿದ ಎಲ್ಲರಿಗೂ ಈ ಬಗ್ಗೆ ಯಾವಾಗಲೂ ಮುಕ್ತವಾಗಿ ಹೇಳಿದ್ದೇನೆ ಎಂದೂ ತಾಪ್ಸಿ ತಿಳಿಸಿದ್ದಾರೆ.

'ನನ್ನ ಹೆತ್ತವರು ಒಪ್ಪಿಕೊಳ್ಳದೆ ಯಾರನ್ನು ನಾನು ವಿವಾಹವಾಗುವುದಿಲ್ಲ. ಈ ವಿಚಾರವಾಗಿ ನನ್ನೊಂದಿಗೆ ಡೇಟ್ ಮಾಡಿದ ಮತ್ತು ಮದುವೆಯಾಗಬೇಕು ಎಂದು ಯೋಚಿಸಿದ ಎಲ್ಲರ ವಿಚಾರದಲ್ಲೂ ನಾನು ತುಂಬಾ ಪ್ರಾಮಾಣಿಕಳಾಗಿದ್ದೇನೆ. ಮದುವೆಯಾಗುವ ಸಾಧ್ಯತೆ ಇದ್ದರೆ ಮಾತ್ರವೇ ನಾನು ಆ ವ್ಯಕ್ತಿಗಾಗಿ ನನ್ನ ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕು. ಟೈಮ್ ಪಾಸ್ ಮಾಡಲು ನನಗೆ ಯಾವುದೇ ಆಸಕ್ತಿ ಇಲ್ಲ. ಹಾಗಾಗಿಯೇ ಅದನ್ನು ಯಾವಾಗಲೂ ಆ ದೃಷ್ಟಿಕೋನದಿಂದಲೇ ನೋಡಿದ್ದೇನೆ. ಒಂದು ವೇಳೆ ಅದಾಗದಿದ್ದರೆ ಹೋಗಲಿ' ಎಂದು ತಾಪ್ಸಿ ಕರ್ಲಿ ಟೇಲ್ಸ್‌ (Curly Tales) ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: 

ಎಕನಾಮಿಕ್ ಟೈಮ್ಸ್‌ನೊಂದಿಗೆ ಮಾತನಾಡುತ್ತಾ, 'ತನ್ನ ವೃತ್ತಿಜೀವನದಲ್ಲಿ ಇನ್ನೂ ಕೆಲವು ಮೈಲುಗಲ್ಲುಗಳನ್ನು ನಾನು ತಲುಪಿಲ್ಲ. ಒಮ್ಮೆ ಅದನ್ನು ತಲುಪಿದರೆ, ವರ್ಷಕ್ಕೆ ಐದು-ಆರು ಚಲನಚಿತ್ರಗಳನ್ನು ಮಾಡುವ ಬದಲು ಎರಡು-ಮೂರು ಚಿತ್ರಗಳನ್ನು ಮಾಡುತ್ತೇನೆ. ಆಗ ಮಾತ್ರವೇ ನನ್ನ ವೈಯಕ್ತಿಕ ಜೀವನದತ್ತ ಗಮನಹರಿಸಲು ನನ್ನ ಬಳಿ ಸಮಯವಿರುತ್ತದೆ' ಎಂದು ತಾಪ್ಸಿ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟ್‌ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್‌ ಅವರ ಬಯೋಪಿಕ್‌ನಲ್ಲಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ಆದರೆ, ಹೊಸ ಚಿತ್ರದಲ್ಲಿಯೂ ಆಕೆ ಅಥ್ಲೀಟ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು ‘ರಶ್ಮಿ ರಾಕೆಟ್‌’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು