ಗುರುವಾರ , ಅಕ್ಟೋಬರ್ 17, 2019
24 °C

ಕಬಡ್ಡಿ ಕೋಚ್ ತಮನ್ನಾ

Published:
Updated:
Prajavani

ಟಾಲಿವುಡ್ ನಟಿ ತಮನ್ನಾ ಭಾಟಿಯಾ, ಕಬಡ್ಡಿ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಸಂಪತ್‌ನಂದಿ ನಿರ್ದೇಶನದ ನಟ ಗೋಪಿಚಂದ್‌ ಅವರ ಸಿನಿಮಾದಲ್ಲಿ ತಮನ್ನಾ ಕೋಚ್‌ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. 2005ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ತಮನ್ನಾ, ಅಂದಿನಿಂದ ಇಲ್ಲಿಯವರೆಗೂ ಬ್ಯುಸಿ ನಟಿಯಾಗಿದ್ದಾರೆ.

‘ಕ್ರೀಡಾ ಸ್ಫೂರ್ತಿಗೆ ಸಂಬಂಧಿಸಿದ ಸಿನಿಮಾ ಇದಾಗಿದೆ. ಇದರಲ್ಲಿ ನಾನು ಮಹಿಳೆಯರ ತಂಡದ ಕೋಚ್ ಆಗಿರುತ್ತೇನೆ. ಈ ರೀತಿಯ ಸ್ಕ್ರಿಪ್ಟ್ ಬಂದಾಗ ಖುಷಿಯಿಂದ ಒಪ್ಪಿಕೊಂಡೆ. ಕಬಡ್ಡಿಯನ್ನು ಅಭ್ಯಾಸ ಮಾಡಿ ಸಿನಿಮಾಕ್ಕೆ ನ್ಯಾಯ ಒದಗಿಸುವ ಸವಾಲು ನನ್ನ ಮುಂದೆ ಇದೆ. ಇದೆಲ್ಲಾ ಗೊತ್ತಿದ್ದೇ ಒಪ್ಪಿಕೊಂಡಿದ್ದೇನೆ. ಕಬಡ್ಡಿ ಆಟಗಾರರ ಆಂಗಿಕ ಅಭಿನಯವನ್ನು ಕಲಿಯಬೇಕು, ಜೊತೆಗೆ ತಾಂತ್ರಿಕ ಅಂಶಗಳನ್ನೂ ಅಭ್ಯಾಸ ಮಾಡಬೇಕಿದೆ’ ಎಂದು ತಮನ್ನಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ಪುಲ್ಲೇಲ ಗೋಪಿಚಂದ್‌, ರಮಾಕಾಂತ್‌ ಅರ್ಚೇಕರ್‌, ಗುರು ಹನುಮಾನ್‌, ಸತ್ಪಾಲ್‌ ಸಿಂಗ್‌ ರೀತಿಯ ಕೋಚ್‌ಗಳಿಗೆ ನನ್ನ ಪಾತ್ರವನ್ನು ಅರ್ಪಿಸಲಿದ್ದೇನೆ. ಭಾರತೀಯ ಕ್ರೀಡೆಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ನನ್ನ ಪಾತ್ರಕ್ಕೆ ಅವರೇ ಸ್ಫೂರ್ತಿ’ ಎಂದು ತಮನ್ನಾ ಹೇಳಿದ್ದಾರೆ.

Post Comments (+)